Select Page

Advertisement

ಹಸುಗೂಸು ಕೊಂದ ಪಾಪಿಗಳ ಬಂಧನ ; ಕಾಮದಾಟದ ಕ್ರೂರತ್ವ

ಹಸುಗೂಸು ಕೊಂದ ಪಾಪಿಗಳ ಬಂಧನ ; ಕಾಮದಾಟದ ಕ್ರೂರತ್ವ

ಚನ್ನಮ್ಮನ ಕಿತ್ತೂರು : ತಾಲೂಕಿನ ಅಂಬಡಗಟ್ಟಿ ಗ್ರಾಮದ ಮರಿಯಮ್ಮನ ಗುಡಿ ಓಣಿಯ ಬಳಿ ಮೃತ ನವಜಾತ ಹೆಣ್ಣು ಹಸುಗೂಸುವೊಂದು ಮಾರ್ಚ 5 ರಂದು ಪತ್ತೆಯಾಗಿತ್ತು. ನಿರಂತರ ಪೊಲೀಸ್‌ ತನಿಖೆಯಿಂದ ಇದು ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಎಸೆಯಲಾಗಿದೆ ಎಂದು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಬಡಗಟ್ಟಿ ಗ್ರಾಮದ ಯುವಕ ಮಹಾಬಳೇಶ ರುದ್ರಪ್ಪ ಕಾಮೋಜಿ(31), ಸಿಮ್ರಾನ್ ಮೌಲಾಸಾಬ ಮಾಣಿಕಬಾಯಿ (22) ಕೊಲೆಯ ಆರೋಪಿಗಳು ಎಂದು ಪೊಲೀಸ್ ರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ : ಅಂಬಡಗಟ್ಟಿ ಗ್ರಾಮದ ಯುವಕ ಮಹಾಬಳೇಶ ರುದ್ರಪ್ಪ ಕಾಮೋಜಿ ಹಾಗೂ ಅದೇ ಗ್ರಾಮದ ಯುವತಿ ಸಿಮ್ರಾನ್ ಮೌಲಾಸಾಬ ಮಾಣಿಕಬಾಯಿ ಇಬ್ಬರು ಸುಮಾರು ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಪ್ರೀತಿ ಕಾಮಕ್ಕೆ ತಿರುಗಿ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿದ್ದರಿಂದ ಯುವತಿ 9 ತಿಂಗಳ ಗರ್ಭಿಣಿ ಆಗಿದ್ದಳು. ಯುವತಿ ಈ ವಿಷಯವನ್ನು ತಮ್ಮ ಮನೆಯಲ್ಲಿ ಗೊತ್ತು ಮಾಡಿರಲಿಲ್ಲ. ಅವಳಿಗೆ ಹೆರಿಗೆ ನೋವು ಕಂಡು ಕಾಣುಸಿಕೊಂಡಲಿ ತಮ್ಮ ಬಾತ್ ರೂಮ್‌ ನಲ್ಲಿ ಹೆರಿಗೆ ಮಾಡಿಕೊಂಡಿದ್ದಾಳೆ.

ಈ ಸಮಯದಲ್ಲಿ ಪ್ರೀತಿಸಿದ ಯುವಕ ಮಾಹಾಬಳೇಶ ವಿಡಿಯೋ ಕಾಲ್ ನಲ್ಲಿ ಯುವತಿಗೆ ಸಾಥ್ ನೀಡಿದ್ದಾನೆ. ಇನ್ನೂ ಆಕ್ರಮ ಸಂಬಂಧದಲ್ಲಿ ಜನಿಸಿದ ಕಾರಣ ನವಜಾತ ಹೆಣ್ಣು ಶಿಸುನ ತಲೆಗೆ ಗಾಯ ಮಾಡಿ ಕೊಲೆ ಮಾಡಿ ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅವರ ಹಿತ್ತಲಿನ ತಿಪ್ಪೆಗೆ ಎಸೆದು ರಾಕ್ಷಸಿ ಪ್ರವೃತ್ತಿಯ ಅಟ್ಟಹಾಸ ಮೆರೆದ್ದಾಳೆ. ಇದನ್ನು ನೋಡಿದ ಗ್ರಾಮಸ್ಥರು ಪೋಲಿಸ್ ಗಮನಕ್ಕೆ ತಂದಿದ್ದರು.

ಈ ಪ್ರಕರಣವನ್ನು ಕಿತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ ಪ್ರವೀಣ ಗಂಗೋಳ ನಿರಂತರ ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇಂತಹ ಪ್ರಕರಣಗಳಲ್ಲಿ ತಾಯಿಯನ್ನು ಪತ್ತೆ ಹಚ್ಚುವುದು ತುಂಬಾ ಕಷ್ಟ. ಕಿತ್ತೂರು ಪೊಲೀಸ್ ಕಾಳಜಿವಹಿಸಿ ಪ್ರಕರಣವನ್ನು ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ. ಮೃತ ಕಂದನಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ.

ಡಾ. ಭೀಮಾಶಂಕರ ಗುಳೇದ್, ಜಿಲ್ಲಾ ವರಿಷ್ಠಾಧಿಕಾರಿ

Advertisement

Leave a reply

Your email address will not be published. Required fields are marked *

error: Content is protected !!