
JNMC ಹಾಸ್ಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಾಪತ್ತೆ ; ಪ್ರಕರಣ ದಾಖಲು

ಬೆಳಗಾವಿ : ನಗರದ ಜೆಎನ್ಎಮ್ ಸಿ ವೈದ್ಯಕೀಯ ಮಹಾವಿದ್ಯಾಲಯದ ಹಾಸ್ಟೆಲ್ ನಲ್ಲಿ ಕೆಲಸಕ್ಕಿದ್ದ ಮಹಿಳೆ ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಗಂಡವಾಡದ ಬಸವಣ್ಣಗಲ್ಲಿಯ ಭಾರತಿ ದಾಸನಕೊಪ್ಪ ( 49 ) ಮಹಿಳೆ ಕಳೆದ ಜುಲೈ ತಿಂಗಳಲ್ಲಿ ಕಾಣೆಯಾಗಿದ್ದು, ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಐದು ತಿಂಗಳ ನಂತರ ಪ್ರಕರಣ ದಾಖಲಾಗಿದೆ.
ಮಹಿಳೆ ಜೆಎನ್ಎಮ್ ಸಿ ಹಾಸ್ಟೆಲಿನಲ್ಲಿ ಕೆಲಸ ಮಾಡುತ್ತಿದ್ದ ಇವರು ಎಂ.ಕೆ ಹುಬ್ಬಳ್ಳಿ ಹತ್ತಿರದ ಮಲಪ್ರಭಾ ನದಿ ಹತ್ತಿರ ಬ್ಯಾಗ್ ಹಾಗೂ ಮೋಬೈಲ್ ಇಟ್ಟು ಕಾಣೆಯಾಗಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.