ಬೆಳಗಾವಿ : ಬೆಳಗಾವಿ ಸಾರ್ವಜನಿಕ ‌ಶಿಕ್ಷಣ ಇಲಾಖೆ ಉಪನಿರ್ದೇಶಕರ ಹುದ್ದೆಗೆ ಲೀಲಾವತಿ ಹಿರೇಮಠ ಅವರನ್ನು ನೇಮಕ‌ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ಹಲವು ತಿಂಗಳಿನಿಂದ ಖಾಲಿ ಇದ್ದ ಡಿಡಿಪಿಐ ಹುದ್ದೆಗೆ ಲೀಲಾವತಿ ಹಿರೇಮಠ ಅವರನ್ನು ನೇಮಿಸಲಾಗಿದೆ. ಈ ಹಿಂದೆ ಬೆಳಗಾವಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.