
ಶಾಸಕರೇ ಕನ್ನಡದಲ್ಲಿ ಶುಭಾಶಯ ಯಾಕಿಲ್ಲ….? ಎಲ್ಲರಿಗೂ ಒಂದೇ ಕಾನೂನು ಅಲ್ವಾ

ಬೆಳಗಾವಿ : ಕನ್ನಡ ಭಾಷೆಯನ್ನು ಉಳಿಸಬೇಕಾದ ಜನಪ್ರತಿನಿಧಿಗಳೇ ಭಾಷೆ ಮರೆತರೆ ಹೇಗೆ ಎಂಬ ಪ್ರಶ್ನೆ ಮೂಡಿದೆ. ಜಾಹಿರಾತು ಫಲಕದಲ್ಲಿ ಕನ್ನಡವನ್ನು ಶೇಕಡಾ 70 ರಷ್ಟು ಬಳಸಬೇಕಾದ ಕಾನೂನು ಕೇವಲ ಜನಸಾಮಾನ್ಯರಿಗೆ ಮಾತ್ರ ಸೀಮಿತವಾ ಎಂಬ ಪ್ರಶ್ನೆ ಮೂಡಿದೆ.
ಹೌದು ಸ್ವಾತಂತ್ರ್ಯ ದಿನದ ಅಂಗವಾಗಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್ ಅವರ ಹೆಸರಿನಲ್ಲಿ ಅಳವಡಿಸಿರುವ ಬ್ಯಾನರ್ ನಲ್ಲಿ ಕನ್ನಡವೇ ಮಾಯವಾಗಿದೆ. ಕೇವಲ ಆಂಗ್ಲ ಭಾಷೆಯಲ್ಲೇ ಅವರು ಶುಭಾಶಯ ತಿಳಿಸಿದ್ದು ಇದು ಕನ್ನಡಿಗರಿಗೆ ನೋವು ತರಿಸಿದೆ.
ಎಲ್ಲಿದೆ ಕನ್ನಡ ಹುಡುಕಿಕೊಡಿ..
ಜನಸಾಮಾನ್ಯನಾಗಿ ನನ್ನದು (ಕೃಷ್ಣ ಹಿತ್ತಲಮನಿ) ಒಂದು ಪ್ರಶ್ನೆ ಮುಂದಿಟ್ಟಿದ್ದಾರೆ.
ಬೆಳಗಾವಿ ಜಿಲ್ಲಾ ಆಡಳಿತ ಹಾಗೂ ಸರ್ಕಾರಕ್ಕೆ . 60% , 70% ಕನ್ನಡ ಎಲ್ಲಿ ಬಳಕೆ ಆಗಿದೆ ನಿಯಮಗಳು ಮತ್ತು ನಿಬಂಧನೆಗಳು ಬರಿ ಜನಸಾಮಾನ್ಯರಿಗೆ ಮಾತ್ರವೇ ? MLA. MP VIP ಗಳಿಗೆ ಒಂದು ಕಾನೂನು ವ್ಯವಸ್ಥೆ ಜನಸಾಮಾನ್ಯರಿಗೆ ಒಂದು ವ್ಯವಸ್ಥೆ ? ಜನಸಾಮಾನ್ಯರ ಪ್ರತಿನಿಧಿಸುವ ಪ್ರತಿನಿಧಿಗಳು ಈ ತರದ ಉಲ್ಲಂಘನೆಗಳು ಮಾಡಿದಾಗ ಯಾರಿಗೆ ಹೇಳುವುದು. ಯಾರಿಗೆ ಕೇಳುವುದು ?