ಸೇವಾ ನಿವೃತ್ತಿ ಹೊಂದಿದ ಶಿಕ್ಷಕ ಬಿರಾದಾರ್ ಸೇವೆ ಕೊಂಡಾಡಿದ ಗ್ರಾಮಸ್ಥರು
ಅಥಣಿ : ಸುಭದ್ರ ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ಕಳೆದ 30 ವರ್ಷಗಳಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಜ್ಞಾನದ ಫಲ ನೀಡಿ ನಿವೃತ್ತಿ ಹೊಂದಿದ ಶಿಕ್ಷಣ
ಬಸಗೊಂಡ ಬಿರಾದಾರ್ ಕಾರ್ಯ ಶ್ಲಾಘನೀಯ ಎಂದು
ಝುಂಜರವಾಡದ ಪ್ರಾಥಮಿಕ ಶಾಲೆ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಬಾಹುಬಲಿ ಪಾಟೀಲ್ ಅಭಿಪ್ರಾಯಪಟ್ಟರು.
ಬುಧುವಾರ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಬಸಗೊಂಡ ಬಿರಾದಾರ್ ಅವರ ಸೇವಾ ನಿವೃತ್ತಿ ದಿನದಂದು ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿ. ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಬಿರಾದಾರ್ ಅವರು ನಿರಂತರ ಸೇವೆ ಸಲ್ಲಿಸಿದವರು. ಗ್ರಾಮೀಣ ಭಾಗದ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅವರ ಪಾತ್ರ ಅನನ್ಯ.
ಮುಂಬರುವ ಇವರ ನಿವೃತ್ತಿ ದಿನಗಳು ಸುಖಕರವಾಗಿರಲಿ ಎಂದು ಹಾರೈಸಿದರು.
ವಲಯ ಮೇಲ್ವಿಚಾರಕ ವಿಜಯಕುಮಾರ್ ಕನಾಳ ಮಾತನಾಡಿ. ಶಿಕ್ಷಕರು ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದಲೇ ಶಿಷ್ಯರ ಮನಃ ಪಟಲದಲ್ಲಿ ಸದಾ ನಿಲ್ಲುತ್ತಾರೆ, ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಉತ್ತಮ ಶಿಕ್ಷಕರಿಂದಲೇ ಸಾಧ್ಯವಾಯಿತು ಎಂದರು.
ಸೇವಾ ನಿವೃತ್ತಿ ಪಡೆದ ಶಿಕ್ಷಕರ ಬಸಗೊಂಡ ಬಿರಾದಾರ ಮಾತನಾಡಿ. ಮೊದಲಿನಿಂದಲೂ ಝುಂಜರವಾಡ ಗ್ರಾಮ ಚಿರಪರಿಚಿತ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ನಮಗೆ ತಂದೆ ತಾಯಿ ಆ ಬಡತನದಲ್ಲಿ ಶಿಕ್ಷಣ ಕೊಡಿಸಿದರು. ನಂತರ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವೆ. ಅನೇಕ ಸಂದರ್ಭಗಳಲ್ಲಿ ಮಾರ್ಗದರ್ಶನ ನೀಡಿದ ಗ್ರಾಮದ ಜನರಿಗೆ ಹಾಗೂ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಚೆನ್ನಪ್ಪ ನೇಸರಗಿ, ವಕೀಲರಾದ ಸ್ವಪ್ನಿಲ್ ಪಟೇಲ್, ವಿವೇಕಾನಂದ ಬಾಗೇವಾಡಿ, ಮಹಾವೀರ್ ಹಳಿಂಗಳಿ, ಅಣ್ಣಸಾಬ್ ನದಾಫ್, ಶೀತಲಗೌಡ ಸವದತ್ತಿ, ಎ ಜಿ ದೇಶಪಾಂಡೆ, ಎಸ್ ಸಿ ಬಿದರಿ, ಬೀರಪ್ಪ ಸನದಿ, ಜಿ ಎಂ ಬಡಿಗೇರ್ , ಎಸ್ ಎಸ್ ಹುಟಿ, ಎ ಸ್ ಪೂಜಾರಿ, ಜಿಎಸ್ ಶಿರೋಳ್, ಎಂ ಬಿ ಬಿಜ್ಜರಗಿ, ವೀಣಾ ಸಿಂಧೂರ್, ಆನಂದ ತೇಲಿ, ಮಹಾಂತೇಶ್ ಕುಂಬಾರ್ ಉಪಸ್ಥಿತರಿದ್ದರು, ಗೌರವ್ವ ಡೋನಜ್ ಕಾರ್ಯಕ್ರಮ ನಿರೂಪಿಸಿದರು, ನಂದೆಪ್ಪ ಬಗಲಿಪಾಟೀಲ್ ವಂದಿಸಿದರು.
ಮಕ್ಕಳ ಭವಿಷ್ಯಕ್ಕೆ ದೇಣಿಗೆ ನೀಡಿದ ನಿವೃತ್ತ ಶಿಕ್ಷಕ ಬಿರಾದರ್
ಕಳೆದ 30 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಸಗೊಂಡ ಬಿರಾದಾರ ಅವರು ತಾವು ಕೆಲಸ ಮಾಡಿದ್ದ ಗೌಡರ ತೋಟದ ಶಾಲೆಯ ಮಕ್ಕಳ ಭವಿಷ್ಯದ ಒಳಿತಿಗಾಗಿ ವೈಯಕ್ತಿಕ ಹತ್ತು ಸಾವಿರ ರೂ. ಚೆಕ್ ನೀಡಿದರು. ಈ ಹಣವನ್ನು ಬ್ಯಾಂಕ್ ಖಾತೆಯಲ್ಲಿರಿಸಿ ಪ್ರತಿ ವರ್ಷ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿಗಳಿ ಸಹಾಯ ದನದ ರೂಪದಲ್ಲಿ ಅದರಿಂದ ಬಂದ ಬಡ್ಡಿ ಹಣವನ್ನು ವಿತರಿಸಿ ಎಂದು
ವಿನಂತಿಸಿದರು.