Select Page

Advertisement

ಗೋಕಾಕ್ : ಸಿಡಿಮದ್ದು ಸ್ಫೋಟದಲ್ಲಿ ವ್ಯಕ್ತಿ ಸಾವು

ಗೋಕಾಕ್ : ಸಿಡಿಮದ್ದು ಸ್ಫೋಟದಲ್ಲಿ ವ್ಯಕ್ತಿ ಸಾವು

ಗೋಕಾಕ್ : ಸಿಡಿಮದ್ದು ತಯಾರಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸ್ಪೋಟಗೊಂಡ ಪರಿಣಾಮ ವ್ಯಕ್ತಯೋರ್ವ ಬೆಂಕಿಯಲ್ಲಿ ಸಜೀವ ದಹನವಾಗಿರುವ ಘಟನೆ ನಡೆದಿದೆ.

ಜಿಲ್ಲೆಯ ಗೋಕಾಕ್ ತಾಲೂಕಿನ ಪಾಮಲದಿನ್ನಿ‌ ಗ್ರಾಮದಲ್ಲಿ ನಡೆದ ಸ್ಪೋಟದಲ್ಲಿ ಮಲ್ಲಪ್ಪ ಸತ್ಯಪ್ಪ ಕಂಕಣವಾಡಿ (38 ) ಮೃತಪಟ್ಟಿದ್ದಾರೆ. ಪಂಚಮಿ ಹಬ್ಬಕ್ಕೆ ಸಿಡಿಮದ್ದು ಹಾರಿಸಲುವ ಉದ್ದೇಶದಿಂದ ಮದ್ದು ತಯಾರಿಸುತ್ತಿದ್ದ ಸಂದರ್ಭದಲ್ಲಿ ಸ್ಪೋಟ ಸಂಭವಿಸಿದೆ.

ಸಿಡಿಮದ್ದು ಇದ್ದಕ್ಕಿದ್ದಂತೆ ಸ್ಪೋಟಗೊಂಡ ಪರಿಣಾಮ ಮಲ್ಲಪ್ಪ ಸುಟ್ಟು ಕರಕಲಾಗಿದ್ದಾನೆ. ಸ್ಪೋಟದ ರಭಸಕ್ಕೆ ತಗಡಿನ ಮನೆ ಸುಟ್ಟು ಹೋಗಿದೆ. ಸ್ಥಳಕ್ಕೆ ಘಟಪ್ರಭಾ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Leave a reply

Your email address will not be published. Required fields are marked *

error: Content is protected !!