ಖಾಕಿ ಬಿಟ್ಟು ಖಾದಿ ತೊಟ್ಟ ಬೀಸನಕೊಪ್ಪ ; ಅಥಣಿ ಅಖಾಡಕ್ಕೆ ಅಧಿಕಾರಿ ಎಂಟ್ರಿ
ಅಥಣಿ : ಖಡಕ್ ಪೊಲೀಸ್ ಅಧಿಕಾರಿ ಎಂದೇ ಗುರಿತಿಸಿಕೊಂಡಿರುವ ವಿಜಯಪುರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸಿದ ಬಸವರಾಜ ಬೀಸನಕೊಪ್ಪ ಸಧ್ಯ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಈ ಹಿಂದೆಯೇ ಬಸವರಾಜ ತಮ್ಮ ಪೊಲೀಸ್ ವೃತ್ತಿ ತೊರೆದು ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತು ಬಲವಾಗಿ ಕೇಳಿಬಂದಿತ್ತು. ಆದರೆ ಅಥಣಿ ಮತಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ನಿರ್ಧರಿಸಿರುವ ಅವರು ಈಗಾಗಲೇ ತಮ್ಮ ಸಿಪಿಐ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಾಜಿ ಡಿಸಿಎಂ ಲಕ್ಷಣ ಸವದಿ, ಶಾಸಕ ಮಹೇಶ್ ಕುಮಠಳ್ಳಿ ಅವರಂತಹ ಘಟಾನುಘಟಿ ರಾಜಕಾರಣಿಗಳನ್ನು ಹೊಂದಿರುವ ಅಥಣಿ ಕ್ಷೇತ್ರ ಕ್ಕೆ ಸಧ್ಯ ಖಡಕ್ ಪೊಲೀಸ್ ಅಧಿಕಾರಿ ಎಂದೇ ಖ್ಯಾತಿ ಹೊಂದಿರುವ ಬಸವರಾಜ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು ಚುನಾವಣೆ ಕಾವು ರಂಗೇರುವಂತೆ ಮಾಡಿದೆ.
ಮೂಲತಃ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬಸವರಾಜ ಬೀಸನಕೊಪ್ಪ ಪ್ರಭಲ ಪಂಚಮಸಾಲಿ ಸಮುದಾಯದವರು. ಅಥಣಿ ಮತಕ್ಷೇತ್ರದಲ್ಲಿ ಪಂಚಮಸಾಲಿ ಮತಗಳು ಜಾಸ್ತಿ ಇದ್ದು ಬೀಸನಕೊಪ್ಪ ಅವರಿಗೆ ಯುವಕರ ತಂಡ ಬೆನ್ನಿಗೆ ನಿಂತಿದೆ. ಈ ಎಲ್ಲಾ ಬೆಳವಣಿಗೆಯಿಂದ ಅಥಣಿ ಚುನಾವಣಾ ಕಾವು ರಂಗು ಪಡೆದಿದ್ದು ಜನ ಯಾರಿಗೆ ಆಶಿರ್ವಾದ ಮಾಡಲಿದ್ದಾನೆ ಎಂದು ಕಾದು ನೋಡಬೇಕು.
KRP – ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧೆ ಸಾಧ್ಯತೆ : ಜನಾರ್ಧನ ರೆಡ್ಡಿ ಅವರು ಹುಟ್ಟುಹಾಕಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಪೊಲೀಸ್ ಅಧಿಕಾರಿ ಬೀಸನಕೊಪ್ಪ ಸ್ಫರ್ದಿಸಬಹುದು ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿವೆ.