
ಗ್ರಾಮ ಪಂಚಾಯತಿ ಸದಸ್ಯನ ಮನೆಗೆ ನುಗ್ಗಿ 23.60 ಲಕ್ಷ ಮೌಲ್ಯದ ನಗದು, ಚಿನ್ನಾಭರಣ ದರೋಡೆ

ಬೆಳಗಾವಿ: ಮನೆ ಬಾಗಿಲು ಬಡೆದು ಒಳ ನುಗ್ಗಿದ ಏಂಟು ಜನರ ದುಷ್ಕರ್ಮಿಗಳ ಗುಂಪೊಂದು ಮನೆಯಲ್ಲಿದ್ದವರ ಮೇಲೆ ಹಲ್ಲೆ ಮಾಡಿ ಕೂಡಿಹಾಕಿ, 23ಲಕ್ಷ ಹಣ ಹಾಗೂ 120 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ರಾಮದುರ್ಗ ತಾಲೂಕಿನ ಬನ್ನೂರ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬನ್ನೂರ ತಾಂಡಾದಲ್ಲಿನ ಗ್ರಾಮ ಪಂಚಾಯಿತಿ ಸದಸ್ಯನ ಮನೆಯಲ್ಲಿ ದರೋಡೆಯಾಗಿದೆ. ಸೋಮವಾರ ಮಧ್ಯ ರಾತ್ರಿ ಮನೆ ಬಾಗಿಲು ಬಡೆದು ಒಳ ನುಗ್ಗಿದ ಎಂಟು ಜನ ದುಷ್ಕರ್ಮಿಗಳಿಂದ 23ಲಕ್ಷ ಹಣ, 120ಗ್ರಾಂ ಚಿನ್ನ ದರೋಡೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್ ರಜಪೂತ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಈ ವೇಳೆ ಮನೆಗೆ ನುಗ್ಗಿದ ಖದೀಮರು ಚಂದ್ರಶೇಖರ್ ಮತ್ತು ಪತ್ನಿ, ಸೊಸೆಯನ್ನ ಬೆಡ್ ರೂಮ್ ನಲ್ಲಿ ಕೂಡಿಹಾಕಿ ನಂತರ ದರೋಡೆ ಮಾಡಿದ್ದಾರೆ.
ಪಿಡಿಓ ಆಗಿದ್ದ ಮಗ ಅಕಾಲಿಕ ಮರಣಹೊಂದಿದ್ದರು.
ಮಗನ ಸಾವು ಹಿನ್ನೆಲೆ ವಿಮೆ ಹಣ ಬಂದಿದ್ದನ್ನ ಚಂದ್ರಶೇಖರ ಮನೆಯಲ್ಲಿಟ್ಟಿದ್ದರು. ಸ್ಥಳಕ್ಕೆ ಎಎಸ್‌ಪಿ ಮಹಾನಿಂಗ ನಂದಗಾವಿ, ಶಾಸಕ ಮಹಾದೇವಪ್ಪ ಯಾದವಾಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.