ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ನಡೆದ ಹಗರಣ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ರಾಜೀನಾಮೆ ಕುರಿತು ಸಿಎಂ ಜೊತೆ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ.
ವಿಪಕ್ಷಗಳ ವಿರೋಧ ಹಾಗೂ ಬಳ್ಳಾರಿ ಪಾದಯಾತ್ರೆ ಘೋಷಣೆ ಹಿನ್ನಲೆಯಲ್ಲಿ ಕೇವಲ ನನ್ನಿಂದ ಪಕ್ಷ ಮುಜುಗರ ಅನುಭವಿಸುವ ಪ್ರಸಂಗ ಬಂದಿದೆ ಎಂಬ ಕಾರಣಕ್ಕಾಗಿ ರಾಜೀನಾಮೆ ನೀಡುವ ಕುರಿತು ಸವಿವ ನಾಗೇಂದ್ರ ಸಿಎಂ ಬಳಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಸಚಿವ ನಾಗೇಂದ್ರ ನಿರ್ಧಾರ ಕೇಳಿರುವ ಸಿಎಂ ಡಿಕೆ ಶಿವಕುಮಾರ್, ಯಾವುದೇ ಕಾರಣಕ್ಕೆ ದುಡುಕಿನ ನಿರ್ಧಾರ ಬೇಡ, ನಾಳೆ ಪಕ್ಷದ ಹೈಕಮಾಂಡ್ ಭೇಟಿಯಾಗಿ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಪಾದಯಾತ್ರೆ – ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆ ಘೋಷಣೆ ಮಾಡಿದ್ದು ಸಪ್ಟೆಂಬರ್ 1 ರಿಂದ 10 ದಿನಗಳ ಕಾಲ ಪಾದಯಾತ್ರೆ ಆಯೋಜಿಸಿದೆ. ರಾಯಚೂರಿನ ಗುರುಗುಂಟಾದಿಂದ ಬಳ್ಳಾರಿ ವರೆಗೆ ಈ ಬೃಹತ್ ಪಾದಯಾತ್ರೆ ನೆರವೇರಲಿದ್ದು ಈ ವೇಳೆ ಸರಕಾರದ ವೈಫಲ್ಯ ಜನರಿಗೆ ತಿಳಿಸುವ ಪ್ರಯತ್ನ ಬಿಜೆಪಿ ಮಾಡಲಿದೆ.



