Select Page

Advertisement

ಪೊಲೀಸ್ ಸಿಬ್ಬಂದಿಗೆ ಸರ್ಕಾರದಿಂದ ಗುಡ್ ನ್ಯೂಸ್ ; ಏನಿದು ವಿಶೇಷ..?

ಪೊಲೀಸ್ ಸಿಬ್ಬಂದಿಗೆ ಸರ್ಕಾರದಿಂದ ಗುಡ್ ನ್ಯೂಸ್ ; ಏನಿದು ವಿಶೇಷ..?
Advertisement

ಬೆಂಗಳೂರು : ಪೊಲೀಸ್ ಸಿಬ್ಬಂದಿಗಳ ಅಂತರ್ ಜಿಲ್ಲಾ ವರ್ಗಾವಣೆಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಪತಿ ಹಾಗೂ ಪತ್ನಿ ಪ್ರಕರಣಗಳಲ್ಲಿ ಅಂತರ್ ಜಿಲ್ಲಾ ವರ್ಗಾವಣೆಗೆ ಗೃಹ ಸಚಿವ ಪರಮೇಶ್ವರ್​ ಡಿಜಿ & ಐಜಿಪಿ ಅಲೋಕ್‌ ಮೋಹನ್‌ಗೆ ಸೂಚಿಸಿದ್ದರು.

ಅರ್ಹ ಪತಿ – ಪತ್ನಿ ಪೊಲೀಸ್ ಸಿಬ್ಬಂದಿ ಅಂತರ್ ಜಿಲ್ಲಾ ವರ್ಗಾವಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಹಲವು ತಿಂಗಳಿಂದ ಪತಿ-ಪತ್ನಿ ಪೊಲೀಸರ ವರ್ಗಾವಣೆಗೆ ಆಗ್ರಹ ಕೇಳಿ ಬಂದಿತ್ತು. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುಮಾರು ಮೂರು ವರ್ಷಗಳಿಂದ ಪತಿ-ಪತ್ನಿ ಯಾವುದೆ ಅಂತರ್​ ಜಿಲ್ಲಾ ವರ್ಗಾವಣೆಯಾಗಿಲ್ಲ.

ಕರ್ನಾಟಕ ಪೊಲೀಸ್ ಇಲಾಖೆ ಸಿಬ್ಬಂದಿಗೆ ನಿರ್ಬಂಧಿತವಾಗಿದ್ದ ಈ ಅಂತರ್ ಜಿಲ್ಲಾ ವರ್ಗಾವಣೆಗೆ ಇತ್ತೀಚೆಗೆ ಅವಕಾಶ ನೀಡಲಾಗಿದೆ. 2022ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಪೊಲೀಸ್ ಸಿಬ್ಬಂದಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಕೆಲ ಷರತ್ತುಗಳೊಂದಿಗೆ ಪೊಲೀಸ್ ಸಿಬ್ಬಂದಿ ವರ್ಗಾವಣೆಗೆ ಅವಕಾಶ ನೀಡಲಾಗಿತ್ತು.

ಪೊಲೀಸ್ ಇಲಾಖೆಗೆ ನೇಮಕವಾಗಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರಬೇಕು. ಮಾಜಿ ಯೋಧರು ಸಹ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಆಗಬಹುದು. ಯಾವುದೇ ಒಂದು ಜಿಲ್ಲೆಯಲ್ಲಿ, ನೇಮಕಾತಿ ಹೊಂದಿದ ಹಾಗೂ ಅದೇ ಜಿಲ್ಲೆಯಲ್ಲಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ಯಾವುದೇ ಸಿಬ್ಬಂದಿ ಇತರೆ ಜಿಲ್ಲೆಗಳು ಅಥವಾ ತಮ್ಮ ಸ್ವಂತ ಜಿಲ್ಲೆಗೆ ವರ್ಗಾವಣೆ ಹೊಂದಲು ಅರ್ಹತೆ ಹೊಂದಿರುತ್ತಾರೆ.

Karnataka State Police G Prameshwar

Advertisement

Leave a reply

Your email address will not be published. Required fields are marked *

error: Content is protected !!