Select Page

Advertisement

ಅಥಣಿ – ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಾಯತಿ ಬಿಜೆಪಿ ತೆಕ್ಕೆಗೆ ; ಸವದಿ ಬೆಂಬಲಿಗನಿಗೆ ಮುಖಭಂಗ

ಅಥಣಿ – ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಾಯತಿ ಬಿಜೆಪಿ ತೆಕ್ಕೆಗೆ ; ಸವದಿ ಬೆಂಬಲಿಗನಿಗೆ ಮುಖಭಂಗ

ಅಥಣಿ:-ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಯತಿ ಬಿಜೆಪಿ ತೆಕ್ಕೆಗೆ , ಅಥಣಿ ತಾಲೂಕಿನ ಸಂಕೊನಟ್ಟಿ ಗ್ರಾಮ ಪಂಚಾಯತಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆ ,ಕಾಂಗ್ರೆಸನಿಂದ ಲಕ್ಷ್ಮಣ ಸವದಿ ಆಪ್ತ ಶಂಕರ ಗಡೆದ ವಿರುದ್ದ ಗೋಕಾಕ ಶಾಸಕ ರಮೇಶ ಜಾರಕೊಹೊಳಿ ಶಿಷ್ಯ  ಸಂತೋಷ ಕಕಮರಿಗೆ ಜಯ.

27000 ಜನಸಂಖ್ಯೆ ಹಾಗೂ 56 ಸದಸ್ಯ ಹೊಂದಿರುವ ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಾಯತಿಗೆ ಮಂಗಳವಾರ 2.5 ವರ್ಷ ಅವದಿ ಅಧ್ಯಕ್ಷ ಹಾಗೂ ಉಪಾದ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು ,ಕಾಂಗ್ರೇಸ ಬೆಂಬಲಿತ ಅಭ್ಯರ್ಥಿ ಲಕ್ಷ್ಮಣ ಸವದಿ ಆಪ್ತ ಶಂಕರ ಗಡದೆ 24 ಪಡೆದರು ವಿರುದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಶಿಷ್ಯ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸಂತೊಷ ಕಕಮರಿ 31 ಮತಗಳನ್ನ ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಒಂದು ಮತ ಅಸಿಂದುವಾಗಿದೆ. ಉಪಾದ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ ಬೆಂಬಲಿತ ಅಭ್ಯರ್ಥಿ ರೂಪಾಲಿ ಸೋನಕರ 30 ಮತಗಳನ್ನ ಪಡೆದು ಆಯ್ಕೆಯಾಗಿದ್ದಾರೆ .

ಈ ವೇಳೆ ಮಾಜಿ ಶಾಸಕ ಮಹೇಶ ಕುಮಠಳ್ಳಿ ಗೆದ್ದ ಅಭ್ಯರ್ಥಿಗೆ ಸನ್ಮಾನಿಸಿ ಮಾತನಾಡಿದ ಅವರು ನನ್ನ ಅವದಿಯಲ್ಲೂ ಮತ ಕ್ಷೇತ್ರದಲ್ಲಿ ಪಕ್ಷಾತೀತ ಹಾಗೂ ಜಾತ್ಯಾತಿತವಾಗಿ ಕೆಲಸ ಮಾಡಿದ್ದೇನೆ ಅದೆ ರೀತಿಯಾಗಿ ಪಂಚಯಾತಿ ಅದ್ಯಕ್ಷರಾಗಿ ಆಯ್ಕೆಯಾದ ಸಂತೋಷ ಅವರಿಗೂ ಅದೆ ರೀತಿಯಾಗಿ ಪಕ್ಷಾತೀತ ಹಾಗೂ ಜ್ಯಾತ್ಯಾತೀತವಾಗಿ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳುತ್ತೇನೆ ಎಂದರು .

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂತೋಷ ಕಕಮರಿ ಮಾತನಾಡಿ ನಮ್ಮ ನಾಯಕರಾದ ರಮೇಶ ಜಾರಕಿಹೋಳಿ ಹಾಗೂ ಮಹೇಶ ಕುಮಠಳ್ಳಿಯವರ ಮಾರ್ಗದರ್ಶನದೊಂದಿಗೆ ನನ್ನ ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಹಾಗೂ ಒಳ್ಳೆಯ ಕೆಲಸಗಾರನಾಗಿ ಕೆಲಸ ಮಾಡಿ ನನಗೆ ಆಶರ್ಿವಾದ ಮಾಡಿದ ಜನತೆಯ ಹಾಗೂ ಸದಸ್ಯರ ನಂಬಿಕೆ ಉಳಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು .

ಈ ವೇಳೆ ಮುಖಂಡರದಾ ಮಹಾವೀರ ಪಡನಾಡ ,ಧರೇಪ್ಪಾ ಠಕ್ಕಣ್ಣವರ , ಗೀರಿಶ ಬುಟಾಳಿ ,ರವಿ ಪೂಜಾರಿ, ಮಲ್ಲಿಕಾಜರ್ುನ ಅಂದಾನಿ,ರೇಣುಕಾ ರವಿ ಬಕಾರಿ ,ಅವಿನಾಶ ಹಣಮಾಪುರೆ,ಪ್ರಕಾಶ ನಾಯಿಕ, ಬಸವರಾಜ ದರೂರ,ಅಪ್ಪು ಹಲ್ಯಾಳ,ಸಿದ್ದು ಪಾಟೀಲ ,ಸದಾಶೀವ ಕೊಂಪಿ ,ರಾಜು ನಾಯಿಕ,ಕುಮಾರ ಪಡಸಲಗಿ, ಪ್ರಕಾಶ ಚನ್ನಣ್ಣವರ ,ಸಂಗಮೇಶ ಇಂಗಳಿ ,ಮಹಾಂತೇಶ ನಾಯಿಕ ,ರವಿ ಮಗದುಮ್ , ಸಂತೋಷ ಗಾಳಿ, ಸುದೀಪ ನಾಯಿಕ ಸೇರಿದಂತೆ ಅನೇಕರ್ ಉಪಸ್ಥೀತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!