Select Page

Advertisement

ಅಥಣಿಯಲ್ಲಿ ಮಹಿಳೆಯ ಕೊಲೆ ; ಆಸ್ತಿಗಾಗಿ ಸುಜಾತಾಳ ಉಸಿರು ನಿಲ್ಲಿಸಿದ ಕಿರಾತಕ…!

ಅಥಣಿಯಲ್ಲಿ ಮಹಿಳೆಯ ಕೊಲೆ ; ಆಸ್ತಿಗಾಗಿ ಸುಜಾತಾಳ ಉಸಿರು ನಿಲ್ಲಿಸಿದ ಕಿರಾತಕ…!

ಅಥಣಿ : ಕಬ್ಬಿನ ತೋಟದಲ್ಲಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಥಣಿ ಪಟ್ಟಣದಲ್ಲಿ ನಡೆದಿದೆ.

ಸುಜಾತಾ ಪವಾರ (34) ಮೃತ ಮಹಿಳೆ.‌ ಮಾರ್ಚ್ 5 ರಂದು ಮಹಿಳೆಯನ್ನು ಅಥಣಿ ಪಟ್ಟಣದ ಸಮೀಪದಲ್ಲಿರುವ ಪ್ರದೀಪ್ ಗುಂಡಾ ಎಂಬುವವರ ಕಬ್ಬಿನ ತೋಟದಲ್ಲಿ ಮಹಿಳೆಯನ್ನು‌ ಕೊಲೆ ಮಾಡಲಿಗೆ.

ಮೃತ ಸುಜಾತಾ ಹಾರೂಗೇರಿಯಲ್ಲಿರುವ ಆಕೆಯ ಗಂಡನ ಜೊತೆ ಸಂಬಂಧ ಕಡಿದುಕೊಂಡು ತವರುಮನೆಯಾದ ಅಥಣಿಯಲ್ಲಿ ವಾಸವಿದ್ದಳು. ಈ ವೇಳೆ ಕುಮಾರ ಹವಾಲ್ದಾರ್ ಎಂಬುವವ ಮಹಿಳೆ ಜೊತೆ ಸಂಬಂಧ ಹೊಂದಿದ್ದ.

ಕುಮಾರ್ ಮಹಿಳೆಯ ಆಸ್ತಿ ಹೊಡೆಯಲು ಆಕೆಯನ್ನು‌ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಮಾರ್ಚ್ 05 ರಂದು ಮಧ್ಯಾಹ್ನ ಆರೋಪಿ ಕುಮಾರ ಸುಜಾತಾಳನ್ನು ಬೈಕ್ ಮೇಲೆ ಕರೆದೊಯ್ದು ಕಬ್ಬಿನ ತೋಟದಲ್ಲಿ ಆಕೆಯ ಕುತ್ತಿಗೆಗೆ ಬಟ್ಟೆಯಿಂದ ಕಟ್ಟಿ ಉಸಿರು ಗಟ್ಟಿಸಿ ಕೊಲೆ‌ ಮಾಡಿದ್ದಾನೆ.‌

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Advertisement

Leave a reply

Your email address will not be published. Required fields are marked *

error: Content is protected !!