Select Page

Advertisement

VIDEO : ಬೈಲಹೊಂಗಲ ವೀರ ಯೋಧನಿಗೆ ಕಣ್ಣೀರ ವಿದಾಯ

VIDEO : ಬೈಲಹೊಂಗಲ ವೀರ ಯೋಧನಿಗೆ ಕಣ್ಣೀರ ವಿದಾಯ

ಬೈಲಹೊಂಗಲ : ಧೂಪದಾಳ ಗ್ರಾಮದ ಯೋಧ ಪುಟ್ಟು ಖಾನಪ್ಪ ಕುರಿ (28) ಬೆಂಗಳೂರಿನ ಕಾಂಪೋಜಿಟ್ (ಯಲಹಂಕ) ಆಸ್ಪತ್ರೆಯಲ್ಲಿ ಸೋಮವಾರ ಬೆಳಿಗ್ಗೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಪುಟ್ಟು ಖಾನಪ್ಪ ಕುರಿ ಲಾತೂರನಲ್ಲಿ ಸಿಆರ್‌ಪಿಎಫ್ ನಲ್ಲಿ ತರಬೇತಿ ಸಂದರ್ಭದಲ್ಲಿಯೇ ಗಂಟಲಿನ ತೊಂದರೆಗೆ ಒಳಗಾಗಿ ಲಾತೂರಲ್ಲೆ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ  ಕಾಂಪೂಜೆಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಯೋಧ ಮೃತಪಟ್ಟಿದ್ದಾರೆ.

ಮೃತಯೋಧ ಒಂದೂವರೆ ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೈನಿಕನಿಗೆ ತಂದೆ. ತಾಯಿ, ತಮ್ಮ, ಅಮ್ಮ ಇದ್ದಾರೆ. ಪುಟ್ಟು ಕುರಿ ಅವರ ಪಾರ್ಥಿವ ಶರೀರ ಮಂಗಳವಾರ ಬೆಳಿಗ್ಗೆ ಸಿಆರ್‌ಪಿಎಫ್ ವಾಹನದ ಮೂಲಕ ಬೆಂಗಳೂರಿನಿಂದ ಸ್ವಗ್ರಾಮವಾದ ಧೂಪದಾಳ ಗ್ರಾಮಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ ಯಕ್ಕುಂಡಿಯ ಕುಮಾರೇಶ್ವರ ವಿರಕ್ತಮಠದ ಶ್ರೀ ಪಂಚಾಕ್ಷರ ಸ್ವಾಮಿಜಿ, ಸವದತ್ತಿ ತಹಶೀಲದ್ದಾರ ಗಂಗನಗೌಡ ಬ ಜಕ್ಕನಗೌಡ್ರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ಬೆಂಗಳೂರಿನಿಂದ ಆಗಮಿಸಿದ ಎಸ್‌ಐ ಹನುಮಪ್ಪ ಕಾತರಕಿ ಮತ್ತು ಸೈನಿಕರು ಇಲಾಖೆ ವತಿಯಿಂದ ಅಂತಿಮನಮನ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷೆ ಆಯಿಶಾಭಾನು ಬಾರಿಗಿಡದ, ಉಪಾಧ್ಯಕ್ಷೆ ವೀರಭದ್ರಯ್ಯ ಮಠದ, ತಾಪಂ ಮಾಜಿ ಸದಸ್ಯ ಹಸನಸಾಬ ಬಾರಿಗಿಡದ, ಕಂದಾಯ ನೀರಿಕ್ಷಕ ರಾಮಚಂದ್ರ ತೆಕ್ಕೆವಾರಿ, ಪಿಡಿಒ ಶ್ರೀಶೈಲಗೌಡ ಎನ್. ಗ್ರಾಮಲೆಕ್ಕಾಧಿಕಾರಿ ಎಂ. ಬಿ. ಕದಂ, ವಿನೋದರಾವ ದೇಸಾಯಿ, ಮೋಹನ ಮೇಟಿ, ನಾಗಪ್ಪ ಹಿಟ್ಟಣಗಿ, ಇಸ್ಮಾಯಿಲ್ಲ ಮುಜಾವರ, ಹುಸೇನಸಾಬ ಮುಜಾವರ, ಖಾನಪ್ಪ ಕುರಿ, ಫಕೀರಪ್ಪ ಹಿಟ್ಟಣಗಿ,
ಶಿವಾನಂದ ದೊಡವಾಡ, ಇರಪಾನ ಮುಜಾವರ,ಬಸವರಾಜ ಬಡಿಗೇರ, ಸುಲ್ತಾನಅಲಿಶಾ ಚಿಶ್ತಿ ಅಜ್ಜನವರು, ಹುಸೇನಸಾಬ ಇಮ್ಮನ್ನವರ, ನಿತ್ಯಾನಂದ ಹೀರೆಮಠ, ಇಮಾಮಸಾಬ ಇಮ್ಮನ್ನವರ, ಇತರರಿದ್ದರು.

ದೇಶ ಸೇವೆ ಮಾಡಿ ಬಾಳಿ ಬದುಕಬೇಕಿದ್ದ ವೀರ ಯೋಧ ಬಾರದ ಲೋಕಕ್ಕೆ ಪಯಣ ಬೆಳೆಸಿರುವುದ
ಸಾರ್ವಜನಿಕರನ್ನು ಕಣ್ಣಿರಿನ ಕಡಲಲ್ಲಿ ಮುಳುಗಿಸಿತು. ವೀರಯೋಧ ಅಮರ ರಹೇ ಎಂಬ ಜಯಘೋಷ ಮುಗಿಲು ಮುಟ್ಟುತ್ತಿತ್ತು. ಸಿಆರ್‌ಪಿಎಫ್ ನ ವಾಹನದಲ್ಲಿ ಮೃತ ಸೈನಿಕನ ಪಾರ್ಥಿವ ಶರೀರವನ್ನು ಧೂಪದಾಳ, ಯಕ್ಕುಂಡಿ, ಕಾರ್ಲಕಟ್ಟಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿತು. ಸಾರ್ವಜನಿಕರು ಅಂತಿಮದರ್ಶನ ಪಡೆದನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.

Advertisement

Leave a reply

Your email address will not be published. Required fields are marked *