56 ಲಕ್ಷ ಫಾಲೋವರ್ಸ್ ಇದ್ದವನಿಗೆ ಚುನಾವಣೆಯಲ್ಲಿ ಸಿಕ್ಕಿದ್ದು 155 ಮತ
ಮುಂಬೈ : ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ್ದರೆ ಅವರ ಹಿಂದೆ ಅಷ್ಟು ಜನಬೆಂಬಲ ಇದೆ ಎಂದು ನಂಬುವುದು ಶುದ್ಧ ತಪ್ಪು ಎಂದು ಈ ಪ್ರಕರಣದಿಂದ ತಿಳಿದುಬರುತ್ತದೆ. Instagram ನಲ್ಲಿ 56 ಲಕ್ಷ ಫಾಲೋವಸ್೯ ಹೊಖದಿರುವ ನಟನೊಬ್ಬನಿಗೆ ವಿಧಾನಸಭಾ ಚುನಾವಣೆಯಲ್ಲಿ ಬಿದ್ದಿದ್ದು ಕೇವಲ 155 ಮತಗಳು.
ಸಾಮಾಜಿಕ ಜಾಲತಾಣಕ್ಕೂ, ಸತ್ಯಕ್ಕೂ ನಡುವೆ ದೊಡ್ಡ ಅಂತರವಿದೆ. ವ್ಯಕ್ತಿಯೊಬ್ಬರ ಬಗ್ಗೆ ಅವರ ಸಾಮಾಜಿಕ ಜಾಲತಾಣದಲ್ಲಿ ಕಾಣುವುದೆಲ್ಲವೂ ಸತ್ಯವಲ್ಲ, ಬದಲಿಗೆ ಬಹುತೇಕ ಸುಳ್ಳೇ ಹೆಚ್ಚಾಗಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫೋಲೋವರ್ಗಳನ್ನು ಹೊಂದಿರುವವರಿಗೆ ನಿಜ ಜೀವನದಲ್ಲಿ ಹತ್ತು ಮಂದಿ ಆತ್ಮೀಯರು ಸಹ ಇರುವುದಿಲ್ಲ. ಇದಕ್ಕೆ ತಾಜಾ ಉದಾಹರಣೆಯೆಂದರೆ ನಟ ಏಜಾಜ್ ಖಾನ್.
ಹಲವು ದಶಕಗಳಿಂದಲೂ ಬಾಲಿವುಡ್, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿರುವ ಏಜಾಜ್ ಖಾನ್ಗೆ ಇನ್ಸ್ಟಾಗ್ರಾಂನಲ್ಲಿ 56 ಲಕ್ಷ ಫಾಲೋವರ್ಗಳಿದ್ದಾರೆ ಆದರೆ ಚುನಾವಣೆಯಲ್ಲಿ 155 ಮತಗಳನ್ನಷ್ಟೆ ಗಳಿಸಿದ್ದಾರೆ.
ಏಜಾಜ್ ಖಾನ್, ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೆ ಪ್ರತಿಷ್ಢಿತ ಕ್ಷೇತ್ರಗಳಲ್ಲಿ ಒಂದಾದ ವರಸೋವಾದಿಂದ ಸ್ಪರ್ಧೆ ಮಾಡಿದ್ದರು. ಆದರೆ ಏಜಾಜ್ ಖಾನ್ ಹೀನಾಯ ಸೋಲು ಕಂಡಿದ್ದಾರೆ. ನೋಟಾಗಿಂತಲೂ ಕಡಿಮೆ ಮತಗಳು ಏಜಾಜ್ ಖಾನ್ಗೆ ದೊರೆತಿವೆ.
ಸಂಸದ ಚಂದ್ರಶೇಖರ್ ಅಜಾದ್ ರಾವಣ ಅವರ ಆಜಾದ್ ಸಮಾಜ್ ಪಾರ್ಟಿಯ ವತಿಯಿಂದ ಅವರು ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆದರೆ ಹೀನಾಯ ಸೋಲು ಕಂಡಿದ್ದಾರೆ. ಅವರಿಗೆ ಕೇವಲ 155 ಮತಗಳು ಮಾತ್ರವೇ ಸಿಕ್ಕಿವೆ.
ಏಜಾಜ್ ಖಾನ್ 2003 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಬಹುತೇಕ ವಿಲನ್ ಪಾತ್ರಗಳಲ್ಲಿಯೇ ಏಜಾಜ್ ಖಾನ್ ಹೆಚ್ಚಾಗಿ ನಟಿಸಿದ್ದಾರೆ. ‘ರಕ್ತ ಚರಿತ್ರ’, ಜೂ ಎನ್ಟಿಆರ್ ನಟನೆಯ ‘ಬಾದ್ಶಾ’, ‘ಟೆಂಪರ್’, ರಾಮ್ ಚರಣ್ ನಟನೆಯ
‘ವಿನಯ ವಿಧೇಯ ರಾಮ’ ಕನ್ನಡದಲ್ಲೂ ಬಿಡುಗಡೆ ಆಗಿದ್ದ ‘ರೋಗ್’ ಇನ್ನೂ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. 2018 ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೂ ಒಳಗಾಗಿದ್ದ ಏಜಾಜ್ ಖಾನ್ 26 ತಿಂಗಳ ಕಾಲ ಜೈಲು ವಾಸ ಸಹ ಅನುಭವಿಸಿದ್ದಾರೆ.