ಬೈಲಹೊಂಗಲ – ಭೀಕರ ರಸ್ತೆ ಅಪಘಾತ : ಇಬ್ಬರು ಸಾವು
ಬೆಳಗಾವಿ : ಬೈಲಹೊಂಗಲ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿ ಓರ್ವ, ಚಿಕಿತ್ಸೆಗೆ ಸಾಗಿಸುತ್ತಿದ್ದ ವೇಳೆ ಇನ್ನೊರ್ವ ಮೃತಪಟ್ಟಘಟನೆ ಜಾಲಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಸಿದ್ದಪ್ಪ ಮಲ್ಲೂರು (11) ಹಾಗೂ ಬಸವಂತಗೌಡ ಮಲ್ಲೂರು (46)ಎಂಬವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬಲವಾಗಿ ಗಾಯಗೊಂಡಿದ್ದ ಮತ್ತೊಬ್ಬ ಸವಾರ ವೀರಣ್ಣ ಚನ್ನಬಸಪ್ಪ ಬಗನಾಳ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಕಾರು ಬೈಲಹೊಂಗಲದಿಂದ ಧಾರವಾಡಕ್ಕೆ ಹೊರಟ್ಟಿತ್ತು ಬೆಳವಡಿಯಿಂದ ಬೈಲಹೊಂಗಲ ಕಡೆಗೆ ಬರುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಮತ್ತು ಕಾರು ನಜ್ಜುಗುಜ್ಜಾಗಿದೆ. ಈ ಘಟನಾ ಸಂಬಂಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.