Select Page

Advertisement

ಬಡ ವಿದ್ಯಾರ್ಥಿ ಶಿಕ್ಷಣಕ್ಕೆ ನೆರವಾದ ನಿಯತಿ ಫೌಂಡೇಶನ್

ಬಡ ವಿದ್ಯಾರ್ಥಿ ಶಿಕ್ಷಣಕ್ಕೆ ನೆರವಾದ ನಿಯತಿ ಫೌಂಡೇಶನ್

ಬೆಳಗಾವಿ : ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಬಡ ವಿದ್ಯಾರ್ಥಿಗಳು ಪಾಲಿಗೆ ಸದಾಕಾಲವೂ ಆಸರೆಯಾಗಿ ನಿಂತಿರುವ ನಿಯತಿ ಫೌಂಡೇಶನ್ ಕಾರ್ಯ ಮುಂದುವರಿದಿದೆ.
ನಿಯತಿ ಫೌಂಡೇಶನ್ ವಿದ್ಯಾರ್ಥಿ ವೇತನದ ಅಡಿಯಲ್ಲಿ ಬಡ ವಿದ್ಯಾರ್ಥಿ ಶಿಕ್ಷಣಕ್ಕೆ ಆರ್ಥಿಕ ಸಹಾಯ ನೀಡಲಾಯಿತು.

ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ರಚೀತ್ ಪಾಟೀಲ್ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲೆಂದು 8 ಸಾವಿರ ರೂ. ಹಣ ಸಹಾಯ ಮಾಡಲಾಯಿತು. ಈ ಸಂದರ್ಭದಲ್ಲಿ ನಿಯತಿ ಫೌಂಡೇಶನ್ ಸಂಸ್ಥಾಪಕಿ ಡಾ. ಸೋನಾಲಿ ಸರ್ನೋಬತ್ ಹಾಗೂ ಇವರ ಪತಿ ಸಮೀರ್ ಸರ್ನೋಬತ್ ಉಪಸ್ಥಿತರಿದ್ದರು.

ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಬಯಸುವ ಆಸಕ್ತಿ ಹೊಂದಿದವರು ನಿಯತಿ ಫೌಂಡೇಶನ್ ಜೊತೆ ಕೈ ಜೋಡಿಸುವ ಅವಕಾಶ ಕಲ್ಪಿಸಿದ್ದು, ಆಸಕ್ತರು ಡಾ. ಸೋನಾಲಿ ಸರ್ನೋಬತ್ ಅವರನ್ನು ಸಂಪರ್ಕಿಸಬಹುದಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!