Select Page

Advertisement

ಆ ವೀಡಿಯೋ ನಮ್ಮದಲ್ಲ ; ಬೇರೆ ವೀಡಿಯೋ ಮಾಡ್ತೆವೆ ಪ್ರೋತ್ಸಾಹಿಸಿ ಎಂದ ಸುಧಾ & ಪಕ್ಕು

ಆ ವೀಡಿಯೋ ನಮ್ಮದಲ್ಲ ; ಬೇರೆ ವೀಡಿಯೋ ಮಾಡ್ತೆವೆ ಪ್ರೋತ್ಸಾಹಿಸಿ ಎಂದ ಸುಧಾ & ಪಕ್ಕು

ಅಶ್ಲೀಲ ವೀಡಿಯೋ ಕುರಿತು ಸ್ಪಷ್ಟನೆ ಕೊಟ್ಟ ಯೂಟ್ಯೂಬ್ ಸ್ಟಾರ್ ಸುಧಾ & ಪಕ್ಕು

ಬೆಳಗಾವಿ : ಕಳೆದ ಕೆಲ ದಿನಗಳ ಹಿಂದೆ ಇಬ್ಬರು ಸ್ಟಾರ್ ಯೂಟ್ಯೂಬರ್ ಜೋಡಿಯದ್ದೇ ಎನ್ನಲಾದ ಅಶ್ಲೀಲ ವೀಡಿಯೋ ಕುರಿತು ಸ್ವತಃ ಇಬ್ಬರು ಕಲಾವಿದರೇ ಸ್ಪಷ್ಟನೆ ನೀಡಿದ್ದಾರೆ‌.

ವೀಡಿಯೋ ರೆಕಾರ್ಡಿಂಗ್ ಸ್ಟೂಡಿಯೋ ಒಂದರಲ್ಲಿ ಜೋಡಿಗಳು ತಮ್ಮ ಖಾಸಗಿ ಸಮಯ ಕಳೆಯುವ ಸಂದರ್ಭದಲ್ಲಿ ಅಲ್ಲೆ ಇದ್ದ ಸಿಸಿಟಿಯಲ್ಲಿ ದೃಶ್ಯ ಸೆರೆ ಹಿಡಿದಿತ್ತು. ಅದನ್ನು ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು.

ಈ‌ ಕುರಿತು ಯುವ ಕಲಾವಿದರದ್ದೇ ಎಂದು ಎಲ್ಲೆಡೆ ಕಾಮೆಂಟ್ ಹರಿದಾಡುತ್ತಿದ್ದವು. ಸಧ್ಯ ಈ ವೀಡಿಯೋ ಕುರಿತು ಸ್ಪಷ್ಟನೆ ನೀಡಿರುವ ಕಲಾವಿದೆ ಸುಧಾ ಬಾಗಲಕೋಟೆ ಹಾಗೂ ಪ್ರಕಾಶ್ ಬಗಲಿ ಇಬ್ಬರು. ಒಂದು ವಾರದಿಂದ ನಮ್ಮ ಹೆಸರಿನಲ್ಲಿ ಓಡಾಡುತ್ತಿರುವ ವೀಡಿಯೋ ನೋಡಿ ಆಶ್ಚರ್ಯ ಆಗಿದೆ. ಆ ವೀಡಿಯೋ ನಮ್ಮದಲ್ಲ ಎಂದು ಹೇಳಿದ್ದಾರೆ.

ಈ‌ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರದ ಮೂವರು ಆರೋಪಿಗಳು ತಾವು ಮಾಡಿರುವ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ. ಅವರ ಭವಿಷ್ಯದ ದೃಷ್ಟಿಯಿಂದ ಪರಕರಣ ದಾಖಲಿಸಲ್ಲ ಎಂದು ಹೇಳಿದ್ದಾರೆ.

ಇದೇ ವೀಡಿಯೋದಲ್ಲಿ ಮೂವರು ಯುವಕರು ಕ್ಷಮೆ ಕೇಳಿದ್ದು.‌ ನಾವು ಪ್ರಕಾಶ್ ಅವರ ಸ್ಟೂಡಿಯೋ ಸಿಸಿಟಿವಿ ಹ್ಯಾಕ್ ಮಾಡಿ ವೀಡಿಯೋ ಶೇರ್ ಮಾಡಿದ್ದೇವು. ಈ ವೀಡಿಯೋದಲ್ಲಿ ಇರುವವರು ಅವರಲ್ಲ. ಇದು ಎಡಿಟ್ ಮಾಡಿರುವ ವೀಡಿಯೋ. ಈ ಕುರಿತು ತಾವು ಕ್ಷಮಿಸಬೇಕು ಎಂದು ಕೇಳಿದ್ದಾರೆ.

ಮುಂದುವರಿದು ಸುಧಾ ಬಾಗಲಕೋಟೆ ಮಾತನಾಡಿ‌. ನವು ಇನ್ಮುಂದೆ ಮನರಂಜನಾ ವೀಡಿಯೋ ಮಾಡುತ್ತೇವೆ. ನೀವು ಬೆಂಬಲಿಸಿ. ಮೊದಲಿನ ಗೌರವ ಕೊಡಿ ಎಂದು ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!