Select Page

Advertisement

ಕಣ್ಣೀರು ಹಾಕಿದ ಅಂಗಡಿ ಕುಟುಂಬ ; ತಾಯಿ, ಮಗಳ ದುಃಖಕ್ಕೆ ಕಾರಣ ಏನು…?

ಕಣ್ಣೀರು ಹಾಕಿದ ಅಂಗಡಿ ಕುಟುಂಬ ; ತಾಯಿ, ಮಗಳ ದುಃಖಕ್ಕೆ ಕಾರಣ ಏನು…?

ಬೆಳಗಾವಿ : ಜಗದೀಶ್ ಶೆಟ್ಟರ್ ಬೆಳಗಾವಿ ಬಿಜೆಪಿ ಅಭ್ಯರ್ಥಿಯಾಗಿ ಸಧ್ಯ ನಸಮಪತ್ರ ಸಲ್ಲಿಸಿದ್ದು ಆಯ್ತು. ಆದರೆ ಈಗ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದ್ದು ಸಂಸದೆ ಮಂಗಳಾ ಅಂಗಡಿ ಅವರ ಕಣ್ಣೀರು.

ದಶಕಳಿಂದ ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ಅಂಗಡಿ ಕುಟುಂಬ ಮೊದಲಬಾರಿಗೆ ಲೋಕಸಭಾ ಸಮರದಿಂದ ದೂರ ಉಳಿದಿದೆ. ಹಾಲಿ ಸಂಸದೆ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ತಪ್ಪಿಸಿ ಬೀಗರಾದ ಜಗದೀಶ್ ಶೆಟ್ಟರ್ ಅವರಿಗೆ ನೀಡಲಾಗಿದೆ.

ಕಳೆದ ಐದು ವರ್ಷದ ಅವಧಿಯಲ್ಲಿ ಅನೇಕ ಏರಿಳತಗಳನ್ನು ಅಂಗಡಿ ಕುಟುಂಬ ನೋಡಿಕೊಂಡು ಬಂದಿದೆ. ಕೊರೊನಾ ಸಂದರ್ಭದಲ್ಲಿ ದಿ. ಸುರೇಶ್ ಅಂಗಡಿ ಅವರ ಅಕಾಲಿಕ ಮರಣ ಕುಟುಂಬಕ್ಕೆ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲದೆ ಕಳೆದ ಉಪ ಚುನಾವಣೆಯಲ್ಲಿ ಮಂಗಳಾ ಅಂಗಡಿ ಗೆಲುವು ಸಾಧಿಸಿದ್ದರು ಈ ಚುನಾಣೆಯಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಜಗದೀಶ್ ಶೆಟ್ಟರ್ ಅನಿರೀಕ್ಷಿತ ನಡೆಯಿಂದ ಅಂಗಡಿ ಕುಟುಂಬ ಅನಿವಾರ್ಯವಾಗಿ ಪರಿಸ್ಥಿತಿ ಒಪ್ಪಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಪರ ನಿಲ್ಲಬೇಕಾದ ವಿಭಿನ್ನ ಪರಿಸ್ಥಿತಿ ಬಂದೊದಗಿದೆ. ಇವೆಲ್ಲದರ ಮಧ್ಯೆ ಜಿಲ್ಲೆಯ ಎಲ್ಲಾ ಪಕ್ಷಗಳ ನಾಯಕರು ಅತ್ಯಂತ ಪ್ರೀತಿಯಿಂದ ಕಾಣುವ ಅಂಗಡಿ ಕುಟುಂಬದ ರಾಜಕೀಯ ಭವಿಷ್ಯದ ಮೇಲೆ ಕಪ್ಪು ಛಾಯೆ ಆವರಿಸಿದೆ.

ಸಧ್ಯ ಮಂಗಳಾ ಅಂಗಡಿ ಅವರು ಕಣ್ಣೀರು ಹಾಕುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಇಲ್ಲಿ ನಾನಾ ಪ್ರಶ್ನೆಗಳು ಉದ್ಭವಿಸಿವೆ. ಒಟ್ಟಿನಲ್ಲಿ ಎರಡು ದಶಕಗಳ ಕಾಲ ಬೆಳಗಾವಿ ರಾಜಕಾರಣದಲ್ಲಿ ಹಿಡಿತ ಹೊಂದಿದ್ದ ಅಂಗಡಿ ಕುಟುಂಬ ಮೊದಲಬಾರಿಗೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಅಭಿಮಾನಿಗಳಿಗೆ ನೋವು ತರಿಸಿದ್ದು ಸುಳ್ಳಲ್ಲ.

Advertisement

Leave a reply

Your email address will not be published. Required fields are marked *

error: Content is protected !!