ಪ್ರತಾಪ್ ಸಿಂಹ ಕೈತಪ್ಪಿತಾ ಮೈಸೂರು ಲೋಕಸಭಾ ಟಿಕೆಟ್ ; ಫೇಸ್ಬುಕ್ ಲೈವ್ ನಲ್ಲೇ ಕಣ್ಣೀರು
ಬೆಂಗಳೂರು : ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಬಹುತೇಕ ಟಿಕೆಟ್ ಮಿಸ್ ಆಗುವ ಸಾಧ್ಯತೆ ದಟ್ಟವಾಗಿದ್ದು, ಫೇಸ್ಬುಕ್ ಲೈವ್ ನಲ್ಲಿ ಕಣ್ಣೀರು ಹಾಕಿರುವ ಘಟನೆ ನಡೆದಿದೆ.
ಕಳೆದ ಕೆಲ ನಿಮಿಷಗಳ ಹಿಂದೆ ಫೇಸ್ಬುಕ್ ಖಾತೆಯಲ್ಲಿ ಲೈವ್ ಬಂದ ಸಂಸದ ಪ್ರತಾಪ್ ಸಿಂಹ ಹಲವಾರು ವಿಚಾರ ಹಂಚಿಕೊಂಡಿದ್ದಾರೆ. ಈ ನಡುವೆ ಕೆಲಸ ಸಮಯ ಕಣ್ಣೀರು ಹಾಕಿದ್ದು ಕಳೆದ ಹತ್ತು ವರ್ಷದ ರಾಜಕೀಯ ಪಯಣ ಮೆಲುಕು ಹಾಕಿದ್ದಾರೆ.
ಸ್ಥಳೀಯ ಬಿಜೆಪಿ ಮುಖಂಡರ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳದ ಹಿನ್ನಲೆಯಲ್ಲಿ ಪ್ರತಾಪ್ ಸಿಂಹ ಅವರ ಕುರಿತು ಸ್ಥಳೀಯರ ಮಧ್ಯೆ ಅಸಮಾಧಾನ ಏರ್ಪಟ್ಟಿತ್ತು. ಹಾಗೆಯೆ ಕಳೆದ ಕೆಲ ದಿನಗಳ ಹಿಂದೆ ಸಂಸತ್ ನಲ್ಲಿ ಸ್ಮೋಕ್ ಬಾಂಬ್ ಪ್ರಕರಣದ ಆರೋಪಿಗಳಿಗೆ ಪಾಸ್ ನೀಡಿದ್ದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಮಿಸ್ ಆಗಲು ಕಾರಣ ಎಂದೂ ಹೇಳಲಾಗುತ್ತಿದೆ.
ಫೇಸ್ಬುಕ್ ಲೈವ್ ನಲ್ಲಿ ಪ್ರತಾಪ್ ಸಿಂಹ ಅವರು ಉದ್ಯಮಿ ವಿಜಯ್ ಸಂಕೇಶ್ವರ್ ಹಾಗೂ ಹಿರಿಯ ಪತ್ರಕರ್ತ ಹಾಗೂ ಸಂಪಾದಕ ವಿಶ್ವೇಶ್ವರ ಭಟ್ ಅವರನ್ನು ನೆನೆದು ಕೆಲಕಾಲ ಬಾವುಕರಾಗಿದ್ದಾರೆ. ಹಾಗೆಯೆ ತಮ್ಮ ಪತ್ರಿಕೋದ್ಯಮ ಬದುಕಿನ ಕ್ಷಣಗಳ ಕುರಿತು ಮಾತನಾಡಿದ್ದಾರೆ.
ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಮೈಸೂರು ಅಧಿದೇವತೆ ಚಾಮುಂಡೇಶ್ವರಿ ಆಶಿರ್ವಾದದ ಫಲವಾಗಿ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವನ್ನು ಪ್ರತಾಪ್ ಸಿಂಹ ಹೊರಹಾಕಿದ್ದಾರೆ.

