ಕಾಂಗ್ರೆಸ್ ಸಭೆ ಕರೆದರೆ ಹುಷಾರಿಲ್ಲ ಎಂದ ಇಂಡಿಯಾ ಒಕ್ಕೂಟದ ಸದಸ್ಯರು
ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲುಕಂಡ ಕಾಂಗ್ರೆಸ್ ಗೆ ಎಲ್ಲವೂ ಉಲ್ಟಾ ಆಗುತ್ತಿದೆ. ಕರ್ನಾಟಕ ಗೆಲುವಿನ ನಂತರ ಅತ್ಯಂತ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಗೆ ತಮ್ಮದೇ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳು ಕೈ ಕೊಡುತ್ತಿವೆ.
ಪಂಚರಾಜ್ಯ ಚುನಾವಣೆ ನಂತರ ಕಾಂಗ್ರೆಸ್ ಮಿತ್ರಪಕ್ಷದ ಸದಸ್ಯರ ಸಭೆ ಕರೆದಿತ್ತು. ಆದರೆ ಇಂಡಿಯಾ ಒಕ್ಕೂಟದ ಸದಸ್ಯರು ಅನಾರೋಗ್ಯ ಕಾರಣ ನೀಡಿ ಗೈರಾಗಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಜೊತೆ ಸೇರಿ ಲೋಕಸಭಾ ಚುನಾವಣೆ ಹೋಗುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಇಂಡಿಯಾ ಒಕ್ಕೂಟ ಸದಸ್ಯದ ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ನಿತೀಶ್ ಕುಮಾರ್ ಅನಾರೋಗ್ಯ ಕಾರಣ ನೀಡಿ ಗೈರಾಗಿದ್ದಾರೆ. ಜೊತೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವೈಯಕ್ತಿಕ ಕೆಲಸದ ನೆಪ ನೀಡಿ ಗೈರಾಗಿದ್ದಾರೆ.
ಇತ್ತ ಉತ್ತರ ಪ್ರದೇಶದ ಎಸ್ಪಿ ನಾಯಕ ಅಖಿಲೇಶ್ ಯಾಧವ್ ಕಾಂಗ್ರೆಸ್ ಸಹವಾಸವೇ ಸಾಕು ಎಂದಿದ್ದಾರಂತೆ. ಪಂಚರಾಜ್ಯ ಚುನಾವಣಾ ಸಂದರ್ಭದಲ್ಲಿ ಕೇವಲು ನಾಲ್ಕಾರು ಸೀಟ್ ಬಿಟ್ಟುಕೊಡದವರ ಜೊತೆ ಯಾವ ಮೈತ್ರಿ ಎಂದು ಕಾಂಗ್ರೆಸ್ ನಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.
ಇನ್ನೂ ದೇಹಲಿ ಹಾಗೂ ಪಂಜಾಬ್ ಆಡಳಿತ ಇರುವ ಎಎಪಿಯ ಅರವಿಂದ ಕೇಜ್ರಿವಾಲ ಕೂಡಾ ಕಾಂಗ್ರೆಸ್ ನಿಂದ ಮಾರುದ್ದ ದೂರ ಇದ್ದು ಒಟ್ಟಿನಲ್ಲಿ ಇಂಡಿಯಾ ಒಕ್ಕೂಟ ಪಂಚರಾಜ್ಯ ಚುನಾವಣೆ ಹೊಡೆತಕ್ಕೆ ಸಿಕ್ಕು ಬಾಡಿ ಹೋದಂತಾಗಿದೆ.
ಸಧ್ಯ ಮೂರು ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ ಮೋದಿ ಮತ್ತೊಮ್ಮೆ ಎಂದು ಹೇಳುತ್ತಿದೆ. ಇತ್ತ ಬಿಜೆಪಿ ಲೋಕಸಭಾ ಚುನಾವಣೆ ಮುಂಚೆ ಸೆಮಿಫೈನಲ್ ನಲ್ಲಿ ಭರ್ಜರಿ ಗೆಲುವಿನ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಮಾಡುವುದು ನಿಶ್ಚಿತ ಎಂದು ಹೇಳಿಕೊಳ್ಳುವಷ್ಟು ಶಕ್ತವಾಗಿ ನಿಂತಿದೆ.


