
ಇಸ್ರೇಲ್ ಯುದ್ಧ ಭೂಮಿಯಲ್ಲಿ ಕನ್ನಡದ ಖ್ಯಾತ ಪತ್ರಕರ್ತ ಅಜಿತ್ ಹನಮಕ್ಕನವರ

ಇಸ್ರೇಲ್ : ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ ಈಗಾಗಲೇ ಸಾವಿರಾರು ಹಮಾಸ್ ಉಗ್ರರು ಪ್ರಾಣ ಕಳೆದುಕೊಂಡಿದ್ದಾರೆ. ಉಗ್ರರ ವಿರುದ್ಧ ಹನುಮ ರೂಪ ತಾಳಿರುವ ಇಸ್ರೇಲ್ ಈ ಬಾರಿ ಶತಾಯ ಗತಾಯ ಹಮಾಸ್ ( Hama’s ) ಉಗ್ರರ ಅಸ್ತಿತ್ವ ಅಡಗಿಸಲು ಮುಂದಾಗಿದೆ.
ಸಧ್ಯ ಉಗ್ರರ ವಿರುದ್ಧ ಇಸ್ರೇಲ್ ಪ್ರಜೆಗಳು ಒಂದಾಗಿ ಹೋರಾಟ ನಡೆಸಿದ್ದು, ಇಲ್ಲಿನ ಜನ ಸೈನ್ಯದ ಜೊತೆ ನಿಂತು ಉಗ್ರರ ವಿರುದ್ಧ ಹೋರಾಡುತ್ತಿದ್ದಾರೆ. ಈ ಮಧ್ಯೆ ರಾಷ್ಟ್ರೀಯವಾದಿ ಪತ್ರಕರ್ತ ಕನ್ನಡದ ಸುವರ್ಣ ವಾಹಿನಿಯ ( Asianet suvarna news ) ಅಜಿತ್ ಹನಮಕ್ಕನವರ. ಇಸ್ರೇಲ್ ( isreal ) ನೆಲದಲ್ಲಿ ನಿಂತು ವರದಿ ಮಾಡಿದ್ದಾರೆ.
ಹೌದು ಯುದ್ಧ ಭೂಮಿಯಲ್ಲಿನ ಚಿತ್ರಣಗಳನ್ನು ಕನ್ನಡದ ಜನರಿಗೆ ತಿಳಿಸುವ ನಿಟ್ಟಿನಲ್ಲಿ ದಕ್ಷಿಣ ಭಾರತದ ಏಕೈಕ ಪತ್ರಕರ್ತ ಅಜಿತ್ ಇಸ್ರೇಲ್ ನೆಲದಲ್ಲಿ ನಿಂತು ವರದಿ ಮಾಡುತ್ತಿದ್ದಾರೆ. ಜೊತೆಗೆ ಅಲ್ಲಿನ ಸ್ಥಳೀಯ ಪರಿಸ್ಥಿತಿ ಕುರಿತು ಮಾಹಿತಿ ಕೊಡುವ ಕೆಲಸ ಮಾಡುತ್ತಿದ್ದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
ಇಸ್ರೇಲ್ ಮಹಿಳಾ ಸೈನಿಕರ ಜೊತೆ ಇರುವ ಪೋಟೋ ಒಂದನ್ನು ಅಜಿತ್ ಹನಮಕ್ಕನವರ ಪೋಸ್ಟ್ ಮಾಡಿದ್ದು ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಇಸ್ರೇಲ್ ಯುದ್ಧ ಭೂಮಿಯಲ್ಲಿ ನಿಂತು ವರದಿ ಮಾಡುತ್ತಿರುವ ಅಜಿತ್ ಅವರಿಗೆ ದೊಡ್ಡ ಸಲಾಂ.