Cricket – ಕಪ್ ಪಡೆಯಲು ನಿರಾಕರಿಸಿದ ರೋಹಿತ್ ಶರ್ಮಾ ; ಹೃದಯವಂತ ಹಿಟ್ ಮ್ಯಾನ್ ಮಾಡಿದ್ದೇನು…?
ಬೆಂಗಳೂರು : ಕೇವಲ ಆಟದಿಂದ ಮಾತ್ರವಲ್ಲ ನಡವಳಿಕೆ ಮೂಲಕವೂ ಭಾರತೀಯ ಕ್ರಿಕೆಟ್ ಆಟಗಾರರು ಆಗಾಗ್ಗೆ ಸುದ್ದಿಯಾಗುತ್ತಾರೆ. ಸಧ್ಯ ಇಂತಹದೇ ಮಾನವೀಯ ನಡೆಯಿಂದ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ( Rohit Sharma ) ಸುದ್ದಿಯಾಗಿದ್ದಾರೆ.
ಹೌದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರು ಪಂದ್ಯದಲ್ಲಿ ಏಕದಿನ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮೊದಲೆರಡು ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ( Virat Kohali ) ಗೆ ವಿಶ್ರಾಂತಿ ಕಲ್ಪಿಸಲಾವಿತ್ತು.
ಈ ಸಂದರ್ಭದಲ್ಲಿ ಭಾರತ ತಂಡಕ್ಕೆ ಕರ್ನಾಟಕ ಕೆ.ಎಲ್ ರಾಹುಲ್ ( KL Rahul ) ಕ್ಯಾಪ್ಟನ್ ಆಗಿದ್ದರು. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಆಡಿದ ಮೊದಲೆರಡು ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಅಷ್ಟೇ ಅಲ್ಲದೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿ ಉತ್ತಮ ಪ್ರದರ್ಶನ ನೀಡಿ ಪಂಧ್ಯದ ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಂಡಿದ್ದರು.
ಇನ್ನೂ ಕೊನೆಯ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಿದ ಭಾರತ ಹೀನಾಯ ಸೋಲು ಅನುಭವಿಸಿತು. ನಂತರ ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಅವರಿಗೆ ಕಪ್ ತೆಗೆದುಕೊಳ್ಳಲು ಸೂಚಿಸಿದಾಗ ನಯವಾಗಿ ತಿರಸ್ಕರಿಸಿದ ಅವರು ಕೆ.ಎಲ್ ರಾಹುಲ್ ಅವರಿಗೆ ಪಡೆದುಕೊಳ್ಳಲು ಅವಕಾಶ ನೀಡಿದರು.
ಸಧ್ಯ ರೋಹಿತ್ ಶರ್ಮಾ ನಡೆಗೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಒಬ್ಬ ಸ್ಟಾರ್ ಆಟಗಾರನಾಗಿ ಮತ್ತೊಬ್ಬರ ಶ್ರಮಕ್ಕೆ ತಕ್ಕ ಪ್ರೋತ್ಸಾಹ ನೀಡುವ ಮೂಲಕ ಸಮಾನವಾಗಿ ಕ್ರೆಡಿಟ್ ನೀಡುವ ಇವರ ಗುಣಕ್ಕೆ ಸಧ್ಯ ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


