Select Page

Advertisement

Cricket – ಏಷ್ಯಾಕಪ್ ಫೈನಲ್ ತಲುಪಿದ ಭಾರತ ; ಶ್ರೀಲಂಕಾ ವಿರುದ್ಧ ರೋಚಕ ಜಯ

Cricket – ಏಷ್ಯಾಕಪ್ ಫೈನಲ್ ತಲುಪಿದ ಭಾರತ ; ಶ್ರೀಲಂಕಾ ವಿರುದ್ಧ ರೋಚಕ ಜಯ

ಭಾರತ ಮತ್ತು ಶ್ರೀಲಂಕಾ ನಡುವೆ ಮಂಗಳವಾರ ನಡೆದ ಏಷ್ಯಾಕಪ್ ( Asia Cup ) ನಾಲ್ಕರ ಹಂತದ ಪಂದ್ಯದಲ್ಲಿ ಭಾರತ 41 ರನ್ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪೈನಲ್ ತಲುಪಿದೆ.‌

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 213 ರನ್ ಗಳಿಸಲು ಶಕ್ತವಾಯಿತು. ಭಾರರದ ಪರ ಅತ್ಯಧಿಕ 53 ರನ್ ಹೊಡೆದ ರೋಹಿತ್ ಶರ್ಮಾ ( Rohith Sharma ) ನಿರಂತರ ಮೂರನೇ ಅರ್ಧಶತಕ ಗಳಿಸಿದರು.

ಸುಲಭ ಸವಾಲು ಬೆನ್ನಟ್ಟಿದ್ದ ಶ್ರೀಲಂಕಾ ತಂಡ ಪ್ರಾರಂಭದಲ್ಲೇ ಹಿನ್ನಡೆ ಅನುಭವಿಸಿತು. ಭಾರತದ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 172 ರನ್ ಗಳಿಸಿ ಸೋಲು ಅನುಭವಿಸಿತು.‌

ಈ ರೋಚಕ ಪಂದ್ಯದಲ್ಲಿ ಭಾರತದ ಪರ ಕುಲದೀಪ್ ಯಾದವ್ 4 ವಿಕೆಟ್ ಪಡೆದರೆ, ಬೂಮ್ರಾ ಹಾಗೂ ರವೀಂದ್ರ ಜಡೆಜಾ ತಲಾ ಎರಡು ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು.‌

ಸಧ್ಯ ಏಷ್ಯಾಕಪ್ ಟೂರ್ನಿಯ ಫೈನಲ್ ಪ್ರವೇಶಿಸಿರುವ ಭಾರತ ನೇರವಾಗಿ ತನ್ನ ಸ್ಥಾನ ಭದ್ರಮಾಡಿಕೊಂಡಿದೆ. ಇನ್ನೂ ಅಂಕ ಪಟ್ಟಿಯಲ್ಲಿ ಶ್ರೀಲಂಕಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವೆ ನಡೆಯುವ ಪಂದ್ಯಗಳ ಆಧರಿಸಿ ಫೈನಲ್ ಆಡುವ ತಂಡ ನಿರ್ಧಾರ ಆಗಲಿದೆ.

Advertisement

Leave a reply

Your email address will not be published. Required fields are marked *

error: Content is protected !!