Select Page

Advertisement

ಹಿಂದೂ ಸಂಪ್ರದಾಯಕ್ಕೆ ತಲೆಬಾಗಿದ ಬ್ರಿಟನ್ ಪ್ರಧಾನಿ ; ಸುನಕ್ ದಂಪತಿ ಅಕ್ಷರಧಾಮ ದೇಗುಲಕ್ಕೆ ಭೇಟಿ

ಹಿಂದೂ ಸಂಪ್ರದಾಯಕ್ಕೆ ತಲೆಬಾಗಿದ ಬ್ರಿಟನ್ ಪ್ರಧಾನಿ ; ಸುನಕ್ ದಂಪತಿ ಅಕ್ಷರಧಾಮ ದೇಗುಲಕ್ಕೆ ಭೇಟಿ

ದೆಹಲಿ : ಜಿ20 ಶೃಂಗಸಭೆ ( G20 Summit ) ಹಿನ್ನಲೆ ಜಗತ್ತಿನ ಶಕ್ತಿಶಾಲಿ ರಾಷ್ಟ್ರದ ಪ್ರಮುಖರು ಭಾರತಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ( Rishi Sunak ) ಹಾಗೂ ಭಾರತೀಯ ಮೂಲದ ಇವರ ಧರ್ಮಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ( Akshardham Temple )

ಬ್ರಿಟನ್ ಪ್ರಧಾನಿಯಾದ ನಂತರ ಮೊದಲಬಾರಿ ಭಾರತಕ್ಕೆ ಅಧಿಕೃತವಾಗಿ ಭೇಟಿ ನೀಡಿರುವ ರಿಷಿ ಸುನಕ್ ಅವರು ದಂಪತಿ ಜೊತೆಗೆ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿರುವ ಹಿನ್ನಲೆಯಲ್ಲಿ ಸುತ್ತಲೂ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ರಿಷಿ ಅವರು ನಾನೊಬ್ಬ ಹೆಮ್ಮೆಯ ಬ್ರಿಟನ್ ಹಿಂದೂ ಎಂದು ಹೇಳಿಕೆ ನೀಡಿದ್ದರು. ಸಧ್ಯ ಪತ್ನಿ ಜೊತೆಗೆ ಅನೇಕ ದೇವಾಲಯಗಳಿಗೂ ಅವರು ಭೇಟಿ ನೀಡುವ ಮೂಲಕ ತಮ್ಮ ಶ್ರದ್ಧೆ ತೋರಿದ್ದಾರೆ.

ಸಪ್ಟೆಂಬರ್ 9 ರಿಂದ ಎರಡು ದಿನಗಳವರೆಗೆ ಜಿ20 ಶೃಂಗಸಭೆ ನಡೆಯುತ್ತಿದ್ದು ವಿಶ್ವದ ಬಲಿಷ್ಠ ರಾಷ್ಟ್ರಗಳು ಇಲ್ಲಿ ಭಾಗವಹಿಸಿವೆ. ಇದೇ ಮೊದಲಬಾರಿಗೆ ಆಫ್ರಿಕಾ ದೇಶಕ್ಕೂ ಜಿ20 ರಲ್ಲಿ ಅವಕಾಶ ಕಲ್ಪಿಸಿದ್ದು ಇನ್ನುಮುಂದೆ ಜಿ21 ಎಂದು ಆಗಬಹುದು.

ಇನ್ನೂ ಭಾರತದ ಪಾಲಿಗೆ ಜಿ20 ಅತ್ಯಂತ ಮಹತ್ವದಾಗಿದ್ದು ಬೇರೆ ಬೇರೆ ದೇಶಗಳ ಜೊತೆ ಮಹತ್ವದ ಚರ್ಚೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ( Narendra Modi ) ನಡೆಸಿದ್ದಾರೆ. ಇದರಿಂದ ಅನೇಕ ಒಡಂಬಡಿಕೆಗಳು ನಡೆಯಲಿದ್ದು ಮುಂಬರುವ ದಿನಗಳಲ್ಲಿ ಭಾರತಕ್ಕೆ ಇದರ ಲಾಭ ದೊರೆಯಲಿದೆ.

Advertisement

Leave a reply

Your email address will not be published. Required fields are marked *

error: Content is protected !!