ವಕ್ಕುಂದ ಮೊರಾರ್ಜಿ ಶಾಲೆಯಲ್ಲಿ ಮಾದರಿ ಸಂಸತ್ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ಮಕ್ಕಳ ಮತದಾನ
ಬೆಳಗಾವಿ: ಬೈಲಹೊಂಗಲ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಕ್ಕುಂದ ಇಲ್ಲಿ 2023 ನೇ ಸಾಲಿನ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು.
ಮಕ್ಕಳಿಗೆ ನೈಜ ಚುನಾವಣೆ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು. ಅಧಿಸೂಚನೆ ಹೊರಡಿಸುವಿಕೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆದುಕೊಳ್ಳುವಿಕೆ, ನಾಮಪತ್ರಗಳ ಪರಿಶೀಲನೆ , ಮತಪತ್ರಗಳ ರಚನೆ ಮುಂತಾದ ಚುನಾವಣಾ ವಿದಿ ವಿಧಾನಗಳ ಮೂಲಕ ನೈಜ ಮಾದರಿಯಲ್ಲಿ ಚುನಾವಣೆ ನಡೆಸಲಾಯಿತು.

ವಸತಿ ಶಾಲೆಯ ಪ್ರಾಂಶುಪಾಲ ಈರಣ್ಣ ಮುನವಳ್ಳಿ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ಸಮಾಜ ವಿಜ್ಞಾನ ಶಿಕ್ಷಕಿಯರಾದ ಕುಮಾರಿ ಎಸ್.ಕೆ.ಮಲ್ಲೂರ ರವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ವಸತಿ ಶಾಲೆಯ ಸಿಬ್ಬಂದಿ ಎಸ್.ಎಮ್. ನದಾಫ, ಶಂಕರ ಪಾಟೀಲ, ಸೀಮಾ ವಿ. ಕಾಂಬಳೆ, ಎಸ್. ಎಮ್. ಶೆಟ್ಟೆಣ್ಣವರ, ಗುರುನಾಥ ಬಡಿಗೇರ, ಎಸ್.ಎಸ್. ಪಟಾತ,ಯು. ಬಿ.ನಾಯ್ಕರ, ವಿಜಯ ಮಠದ ಮಂಜುನಾಥ ಕುಂಬಾರಗೊಪ್ಪ, ಚಂದ್ರಶೇಖರ ಮೇಲಕುಂದಿ ರವರು ಕ್ರಮವಾಗಿ ಪಿ.ಆರ.ಒ, ಎಪಿ ಆರ್ ಒ, ಪೋಲಿಂಗ ಆಫೀಸರ್ ಕರ್ತವ್ಯವನ್ನು ನಿರ್ವಹಿಸಿದರು.

ಮಕ್ಕಳು ಅತ್ಯಂತ ಉತ್ಸುಕತೆಯಿಂದ ಸರತಿ ಸಾಲಿನಲ್ಲಿ ಬಂದು ಮತದಾನ ಮಾಡುವ ಮೂಲಕ ಚುನಾವಣೆಯಲ್ಲಿ ಭಾಗವಹಿಸಿದರು.


