Select Page

Advertisement

Video – ಅಥಣಿಯಲ್ಲಿ ನಮ್ಮ ನಂಬಿಕೆಗೆ ಮೋಸವಾಗಿದೆ ; ಸವದಿ ವಿರುದ್ಧ ಗುಡುಗಿದ ಸಾಹುಕಾರ್

Video – ಅಥಣಿಯಲ್ಲಿ ನಮ್ಮ ನಂಬಿಕೆಗೆ ಮೋಸವಾಗಿದೆ ; ಸವದಿ ವಿರುದ್ಧ ಗುಡುಗಿದ ಸಾಹುಕಾರ್

ಬೆಳಗಾವಿ : ಅಥಣಿ ಕ್ಷೇತ್ರದಲ್ಲಿ ನಮ್ಮ ನಂಬಿಕೆಗೆ ಮೋಸವಾಗಿದೆ. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತಾಗಿದೆ. ಮೂಲ‌ ಕಾಂಗ್ರೆಸ್ ಮತದಾರರು ಕೈ ಹಿಡಿದ ಪರಿಣಾಮ ನಮ್ಮ ಜಯವಾಗಿದೆ ಎಂದು ಬಹಿರಂಗವಾಗಿಯೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಆಕ್ರೋಶ ಹೊರಹಾಕಿದ್ದಾರೆ.

ಅಥಣಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಇವರು. ಈ ಬಾರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸಿತ್ತು. ಆದರೆ ಕೆಲ ಕ್ಷೇತ್ರಗಳಲ್ಲಿ ನಮ್ಮವರಿಂದಲೇ ಮೋಸವಾಗಿದೆ. ಕ್ಷೇತ್ರದ ಅನೇಕ ಕಡೆ ಗೆಲುವಿನ ಗುಲಾಲ್ ಹಾರಿದ್ದರು ಅಥಣಿಯಲ್ಲಿ ಇದು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ನಮ್ಮ ನಂಬಿಕೆಗೆ ಅಥಣಿಯಲ್ಲಿ ಮೋಸವಾಗಿದೆ. ಚುನಾವಣೆ ಪೂರ್ವದಲ್ಲಿ ಇಲ್ಲಿನ ನಾಯಕರು ಪಕ್ಷದ ಕಾರ್ಯಕ್ರಮಗಳಿಗೆ ಭಾಗವಹಿಸಲಿಲ್ಲ. ಪ್ರಚಾರ ಕಾರ್ಯದಲ್ಲಿ ಉತ್ಸಾಹ ತೋರಿಸಲಿಲ್ಲ. ಕೊನೆ ಪಕ್ಷ ನಮಗೆ ತಿಳಿಸಿದ್ದರೆ ನಾವಾದರು ಕೆಲಸ ಮಾಡಿ ಹೆಚ್ಚಿನ ಮತ ಪಡೆಯಲು ಶ್ರಮವಹಿಸಿ ಕೆಲಸ ಮಾಡುತ್ತಿದ್ದೇವು. ಇದರಿಂದ ನಮ್ಮ ಮತ್ತು ಅವರ ಮಧ್ಯೆ ಅಂತರ ಹೆಚ್ಚಾಗಿದೆ ಎಂದು ಸವದಿ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದರು.

ಕಾಗವಾಡದಲ್ಲಿ ಶಾಸಕ ರಾಜು ಕಾಗೆ ಮತದಾನ ಪೂರ್ವದಲ್ಲಿ ಕ್ಷೇತ್ರದ ಸ್ಥಿತಿಗತಿ ಕುರಿತು ತಿಳಿಸಿದ್ದರು. ಸ್ವಲ್ಪ ಕಷ್ಟ ಎದುರಾಗುತ್ತಿದ್ದಂತೆ ನಮಗೂ ಕ್ಷೇತ್ರವನ್ನು ನೋಡಿಕೊಳ್ಳಲು ತಿಳಿಸಿದ್ದರ ಪರಿಣಾಮ ನಾವು ಚುನಾವಣೆಯಲ್ಲಿ ಹೆಚ್ಚಿನ ಕಾರ್ಯ ಮಾಡಲು ಸಹಕಾರಿಯಾಯಿತು. ಇದರಿಂದ ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಹೆಚ್ಚಿನ ಮತ ಪಡೆಯಲು ಸಾಧ್ಯವಾಗಿದೆ. ಆದರೆ ಅಥಣಿಯಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಮುಂದಿನ ದಿನಮಾನದಲ್ಲಿ ಮೂಲ ಕಾಂಗ್ರೆಸ್ಸಿಗರ ಕೈ ಬಲಪಡಿಸುವ ಭರವಸೆಯನ್ನು ಸಚಿವ ಸತೀಶ್ ಜಾರಕಿಹೊಳಿ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಎಸ್.ಕೆ ಬುಟಾಳಿ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!