ಸಿದ್ಧರಾಮಯ್ಯಗೆ ಸಾವರ್ಕರ್ ಭಾವಚಿತ್ರ ನೀಡಿದ ಬಿ.ಜೆ.ಪಿ. ಯುವ ಮೋರ್ಚ ಕಾರ್ಯಕರ್ತರು.

ಕೊಡಗು : ಒಂದು ದಿನದ ಕೊಡಗು ಜಿಲ್ಲಾ ಪ್ರವಾಸಕ್ಕಾಗಿ  ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ  ಕೊಡಗಿನ ಗಡಿ ಭಾಗದ ತಿತಿಮತಿಯಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ.

ಸಾವರ್ಕರ್ ಪೋಟೋ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ,
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ನೇತೃತ್ವದಲ್ಲಿ ನೂರಾರು ಸಂಖ್ಯೆಯ  ಕಾರ್ಯಕರ್ತರು ಸಾವರ್ಕರ್  ಭಾವಚಿತ್ರವನ್ನು ಹಿಡಿದು  ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಗೋ ಬ್ಯಾಕ್ ಸಿದ್ದರಾಮಯ್ಯ ಎಂದು ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ.  ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಜಯಂತಿ ಆಚರಣೆ  ಜಾರಿಗೆ ತಂದು ಸಿದ್ಧರಾಮಯ್ಯ ಇಲ್ಲಿನ ಜನರಿಗೆ ಅನ್ಯಾಯ ಅವರು ಕೊಡಗಿಗೆ ಕಾಲಿಡುವುದರಿಂದ ಶಾಂತಿ ಭಂಗವಾಗುತ್ತದೆ ಎಂದು ಆರೋಪಿಸಿದರು.

ಪೋಲೀಸರು ಬಿಗಿ ಬಂದೋಬಸ್ತ್  ವ್ಯವಸ್ಥೆಗೊಳಿಸಿ ಸಿದ್ಧರಾಮಯ್ಯರ  ವಾಹನ ಮುಂದೆ ಚಲಿಸಲು ವ್ಯವಸ್ಥೆ ಮಾಡಿದರು.