ಬೆಳಗಾವಿ : ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಅಥಣಿಯ ವಕೀಲ ಹಾಗೂ ಕಾಂಗ್ರೆಸ್ ನಾಯಕ ಸುಶೀಲಕುಮಾರ ಪತ್ತಾರ ಅವರಿಗೆ ನಿಗಮ ಮಂಡಳಿ ಸ್ಥಾನ ಕಲ್ಪಿಸಲಾಗಿದೆ.

ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಮಂಡಳಿ ನಿರ್ದೇಶಕರನ್ನಾಗಿ ಸುಶೀಲ ಕುಮಾರ ಪತ್ತಾರ ಅವರನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಸಧ್ಯ ಸುಶೀಲ್ ಕುಮಾರ್ ಪತ್ತಾರ ಅವರ ಆಯ್ಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ ವ್ಯಕ್ತವಾಗಿದೆ. ಹಿಂದೆ ಬಿಜೆಪಿಯಲ್ಲಿದ್ದ ಪತ್ತಾರ ಅವರು ಲಕ್ಷ್ಮಣ ಸವದಿ ಜೊತೆ ಬಿಜೆಪಿ ಸೇರ್ಪಡೆಯಾಗಿದ್ದರು.

ಅಷ್ಟೇ ಅಲ್ಲದೆ ಸಂಘದ ಜೊತೆ ಗುರುತಿಸಿಕೊಂಡಿರುವ ಸುಶೀಲ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡಿರುವ ಕುರಿತು ಸಧ್ಯ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆ ವ್ಯಕ್ತವಾಗುತ್ತಿದೆ.