ಕಾಗವಾಡ : “ಪಕ್ಷದ ಸಂಘಟನೆ ಮತ್ತು ಬೆಳವಣಿಗೆಗೆ ಹೆಣ್ಣುಮಕ್ಕಳು ಸದಾ ಮುಂಚೂಣಿಯಲ್ಲಿ ನಿಂತು ದುಡಿಯಲು ಬೇಕು, ಆದರೆ ಅವರಿಗೆ ವೇದಿಕೆ ಮೇಲಷ್ಟೇ ಸ್ಥಾನ ನೀಡಲು ನಿರಾಕರಿಸಲಾಗುತ್ತದೆ ಯಾಕೆ?” ಎಂದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದನಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯೊಬ್ಬರು ಆಕ್ರೋಶ ಹೊರಹಾಕಿ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ.
https://youtube.com/shorts/T-gdKRZFWak?si=u6bmRiPEqVIujYGo
ಉಗಾರ ಖುರ್ದ ಹೊರವಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ರೇಖಾ ಅವರು ವೇದಿಕೆಯತ್ತ ತೆರಳುತ್ತಿದ್ದಾಗ, ಪ್ರೋಟೋಕಾಲ್ ಹಾಗೂ ಶಿಷ್ಟಾಚಾರದ ನೆಪವೊಡ್ಡಿ ಸ್ಥಳೀಯ ನಾಯಕರೊಬ್ಬರು ಅವರನ್ನು ವೇದಿಕೆಯಿಂದ ಕೆಳಗೆ ಇಳಿಸಿದ್ದಾರೆನ್ನಲಾಗಿದೆ. ಈ ನಡವಳಿಕೆಯಿಂದ ತೀವ್ರ ಬೇಸರಗೊಂಡ ರೇಖಾ ಅವರು, “ಕಾಗವಾಡ ಮತಕ್ಷೇತ್ರದಲ್ಲಿ ಮಹಿಳೆಯರಿಗೆ ಯಾವುದೇ ಗೌರವವಿಲ್ಲ” ಎಂದು ಸಾರ್ವಜನಿಕವಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.



