ಅಥಣಿ : ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಐದು ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ‌ಲಸಿಕೆ ಹಾಕುವ ಕಾರ್ಯಕ್ರಮ ಜರುಗಿತು.

ಈ ವೇಳೆ ಗ್ರಾಮದ ಯುವ ಮುಖಂಡರಾದ ಗುಂಡು ರಡ್ರಟ್ಟಿ ಅವರ ಪುತ್ರರಾದ ಶ್ರೀರಾಮ ಹಾಗೂ ಪ್ರೀತಮ ಇಬ್ಬರಿಗೂ ಪೋಲಿಯೋ ಹನಿ ಹಾಕುವುದರ ಮೂಲಕ ಚಾಲನೆ ನೀಡಲಾಯಿತು.



ಈ ವೇಳೆ ಅಂಗನವಾಡಿ ಮೇಲ್ವಿಚಾರಕಿ ರೂಪಶ್ರೀ ಕೊಡೆತೆ, ಅಂಗನವಾಡಿ ಕಾರ್ಯಕರ್ತೆಯರಾದ ಭಾರತಿ ಎಸ್ ತಳವಾರ್, ಶೈಲಾ ಎಸ್ ತೇಲಿ, ಆಶಾ ಕಾರ್ಯಕರ್ತೆ ಬಂಗಾರವ್ವ ಹೆಚ್ ಗುಂಜಿಗಾಂವ್, ಅಂಗನವಾಡಿ ಸಹಾಯಕಿ ಕಾವೇರಿ ದೀಪಕ್ ವಡ್ಡರ್ ಸೇರಿದಂತೆ ಗ್ರಾಮಸ್ಥರು ‌ಭಾಗವಹಿಸಿದ್ದರು.