ಬೆಳಗಾವಿ : ಕಿರುಕುಳಕ್ಕೆ ಬೇಸತ್ತು ತಾಲೂಕು ಪಂಚಾಯತಿ ಮಹಿಳಾ ಸಿಬ್ಬಂದಿ ರಾಜ್ಯ ಮಹಿಳಾ ಆಯೋಗದ ಮೊರೆ ಹೋದ ಘಟನೆ ಬೆಳಗಾವಿ ಲೋಕಸಭಾ ವ್ಯಾಪ್ತಿಯ ತಾಲೂಕು ಪಂಚಾಯತಿಯಲ್ಲಿ ನಡೆದಿದೆ.
ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದ್ದೆ ಎಂಬ ಗಂಭೀರ ಆರೋಪ ಸಧ್ಯ ತಾಲೂಕು ಪಂಚಾಯಿತಿ ಒಂದರ ಮುಖ್ಯ ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ.
ಈ ಕುರಿತು ರಾಜ್ಯ ಮಹಿಳಾ ಆಯೋಗಕ್ಕೆ ನೊಂದ ಮಹಿಳೆ ದೂರು ನೀಡಿದ್ದು ಕಳೆದ ಎರಡು ದಿನಗಳ ಹಿಂದೆಯಷ್ಟೇ ಆಯೋಗದ ಸದಸ್ಯರು ಆ ತಾಲೂಕು ಪಂಚಾಯಿತಿಗೆ ಭೇಟಿ ನೀಡಿದ್ದಾರೆ.
ಈ ವೇಳೆ ಲೈಂಗಿಕ ಕಿರುಕುಳ ನೀಡಿರುವ ಸಿಬ್ಬಂದಿಗಳ ಕುರಿತು ಹೇಳಿಕೆ ಪಡೆದಿದ್ದು ತನಿಖೆ ನಡೆಸಿದ್ದಾರೆ. ಜೊತೆಗೆ ಸಿಬ್ಬಂದಿಗಳ ವರ್ತನೆಗೆ ಮಹಿಳಾ ಆಯೋಗ ಕಿಡಿಕಾರಿದೆ ಎಂದು ತಿಳಿದಿಬಂದಿದೆ.
ತಾಲೂಕು ಪಂಚಾಯತಿ ಒಂದರ ಮೇಲೆ ಈ ರೀತಿಯ ಗಂಭೀರ ಆರೋಪ ಕೇಳಿಬಂದ ಕಾರಣಕ್ಕೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ಜೋರಾಗಿದೆ.
ತಾಲೂಕು ಪಂಚಾಯತಿಯಲ್ಲಿ ಇದೆಂತ ಅನಾಚಾರ? ; ಹಿರಿಯ ಅಧಿಕಾರಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ..?


