ಬೈಲಹೊಂಗಲ : ಗಂಡು ಮಗು ಹುಟ್ಟಿದ ಸಂಭ್ರಮದ ಪಾರ್ಟಿ ವಿಚಾರಕ್ಕೆ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದಲ್ಲಿ ಮೊಹರಂ ಹಬ್ಬದಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮೋಹರಂ ಹಬ್ಬದ ಸಂಭ್ರಮದ ವೇಳೆ ಗ್ರಾಮದ ಕಟ್ಟೆ ಮೇಲೆ ಮದ್ಯ ಸೇವಿಸುತ್ತಿದ್ದ ಇಬ್ಬರ ನಡುವೆ ಪಾರ್ಟಿ ವಿಚಾರಕ್ಕೆ ಗಲಾಟೆ ನಡೆದಿದೆ.
ಜಗಳದ ವೇಳೆ ಕೋಪಗೊಂಡ ವಿಶ್ವನಾಥ ಕಲ್ಲಿನಿಂದ ಹಣಮಂತನ ತಲೆಗೆ ಹೊಡೆದಿದ್ದಾನೆ.ತೀವ್ರ ರಕ್ತಸ್ರಾವದಿಂದ ಹಣಮಂತ ಸ್ಥಳದಲ್ಲೇ ಮೃತಪಟ್ಟಿದ್ದು, ಆರೋಪಿ ವಿಶ್ವನಾಥನನ್ನು ನೇಸರಗಿ ಪೊಲೀಸರು ಬಂಧಿಸಿದ್ದಾರೆ. ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾರ್ಟಿ ಕೇಳಿದ್ದಕ್ಕೆ ಗೆಳೆಯನನ್ನು ಕಲ್ಲಿನಿಂದ ಜಜ್ಜಿ ಕೊಲೆ ; ನೇಸರಗಿಯಲ್ಲಿ ಹರಿದ ನೆತ್ತರು


