Select Page

Advertisement

ಬೆಳಗಾವಿ : ಅಪಾರ್ಟ್‌ಮೆಂಟ್ ನಲ್ಲಿ ವೇಶ್ಯಾವಾಟಿಕೆ ; ಮಹಿಳೆಯರ ರಕ್ಷಣೆ, ದಂಧೆ ನಡೆಸುತ್ತಿದ್ದವಳ ಬಂಧನ

ಬೆಳಗಾವಿ : ಅಪಾರ್ಟ್‌ಮೆಂಟ್ ನಲ್ಲಿ ವೇಶ್ಯಾವಾಟಿಕೆ ; ಮಹಿಳೆಯರ ರಕ್ಷಣೆ, ದಂಧೆ ನಡೆಸುತ್ತಿದ್ದವಳ ಬಂಧನ



ಬೆಳಗಾವಿ : ನಗರದ ಟಿಳಕವಾಡಿ ಪ್ರದೇಶದ ನೆಹರು ರಸ್ತೆಯಲ್ಲಿರುವ ಬಹುಮಹಡಿ ಅಪಾರ್ಟ್ಮೆಂಟ್‌ನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಟಿಳಕವಾಡಿ ಠಾಣೆ ಪೊಲೀಸರು ದಾಳಿ ನಡೆಸಿ, ತೆಲಂಗಾಣ ಮೂಲದ ಯುವತಿಯನ್ನು ರಕ್ಷಿಸಿ, ದಂಧೆ ನಡೆಸುತ್ತಿದ್ದ ಮಹಿಳೆಯನ್ನು ಬಂಧಿಸಿದ್ದಾರೆ.

ಬಂಧಿತೆಯನ್ನು ಆಯೇಶಾ ಶಬ್ಬಿರ್ ಶೇಖ್ ಅಲಿಯಾಸ್ ರೇಷ್ಮಾ ಅಂಕಲೆವಾಲೆ (31) ಎಂದು ಗುರುತಿಸಲಾಗಿದೆ. ಆರೋಪಿತೆ ಅಪಾರ್ಟ್ಮೆಂಟ್‌ನಲ್ಲಿ ಮನೆ ಬಾಡಿಗೆಗೆ ಪಡೆದು, ತೆಲಂಗಾಣ ರಾಜ್ಯದ ಯುವತಿಯನ್ನು ಅಲ್ಲೇ ಇರಿಸಿಕೊಂಡು ಗಿರಾಕಿಗಳನ್ನು ಮನೆಗೆ ಕರೆಯಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಳು ಎನ್ನಲಾಗಿದೆ.

ಈ ಕುರಿತು ದೊರೆತ ಮಾಹಿತಿ ಆಧರಿಸಿ ಸಿಪಿಐ ಪರಶುರಾಮ ಪೂಜೇರಿ ನೇತೃತ್ವದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು. ದಾಳಿ ವೇಳೆ ಯುವತಿಯನ್ನು ರಕ್ಷಿಸಿ ಆರೋಪಿತೆಯನ್ನು ವಶಕ್ಕೆ ಪಡೆಯಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಗಿರಾಕಿಗಳಿಂದ ಪಡೆಯುತ್ತಿದ್ದ ಹಣದಲ್ಲಿ ಯುವತಿಗೆ ಅಲ್ಪ ಪ್ರಮಾಣದ ಹಣ ನೀಡಿ, ಉಳಿದ ಹಣವನ್ನು ಆರೋಪಿತೆ ಲಾಭಾಂಶವಾಗಿ ಇಟ್ಟುಕೊಳ್ಳುತ್ತಿದ್ದಳು ಎಂಬ ಸಂಗತಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆ (PIT Act)-1956ರ ಕಲಂ 3, 4 ಹಾಗೂ 5ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!