Select Page

Advertisement

ನಾಳೆಯಿಂದ ಜನಗಣತಿ ಪ್ರಕ್ರಿಯೆಗೆ ಚಾಲನೆ – ಮನೆಯಲ್ಲೇ ಗಣತಿಯಲ್ಲಿ ಪಾಲ್ಗೊಳ್ಳುವುದು ಹೇಗೆ..?

ನಾಳೆಯಿಂದ ಜನಗಣತಿ ಪ್ರಕ್ರಿಯೆಗೆ ಚಾಲನೆ – ಮನೆಯಲ್ಲೇ ಗಣತಿಯಲ್ಲಿ ಪಾಲ್ಗೊಳ್ಳುವುದು ಹೇಗೆ..?

ಬೆಂಗಳೂರು: ಭಾರತ ಸರ್ಕಾರದ ( Indian Government ) ಮಹತ್ವದ ಯೋಜನೆಗಳಾದ ಜನಗಣತಿ (census ) ಪ್ರಕ್ರಿಯೆಗೆ ನಾಳೆಯಿಂದ ಚಾಲನೆ ಸಿಗಲಿದೆ.

ಈ ಬಾರಿ ಡಿಜಿಟಲ್ ರೂಪದಲ್ಲಿ ಮಾಹಿತಿ ನೀಡಲು ಸಾರ್ವಜನಿಕರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ಜನಗಣತಿ ಮಾಡುವವರು ಮನೆಗೆ ಬಂದಾಗ ಅವರಿಗೆ ಕೇವಲ ರೆಫರೆನ್ಸ್ ನಂಬರ್ (Reference Number) ನೀಡುವ ಮೂಲಕ ಜವಾಬ್ದಾರಿಯನ್ನು ಪೂರ್ಣಗೊಳಿಸಬಹುದಾಗಿದೆ.

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು https://test.census.gov.in/se/ ಜಾಲತಾಣಕ್ಕೆ ಲಾಗಿನ್ ಆಗಿ ಸೆನ್ಸಸ್ ನಲ್ಲಿ ಭಾಗವಹಿಸಬಹುದಾಗಿದೆ.

ಮೊದಲಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಬರುವ OTP ಬಳಸಿ ಲಾಗಿನ್ ಆಗಿ ಅಲ್ಲಿ ಕಾಣಿಸುವ ‘ಸ್ವಯಂ ಗಣತಿ’ (Self-Enumeration) ಐಕಾನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿ
ಸಲ್ಲಿಸಿ ಜನಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.

ಪ್ರತಿಯೊಬ್ಬರ ಶಿಕ್ಷಣ, ಉದ್ಯೋಗ ಮತ್ತು ಕುಟುಂಬದ ಇತರೆ ಮಾಹಿತಿಯನ್ನು ಸಲ್ಲಿಸಬಹುದಾಗಿದೆ.ಸ್ವಯಂ ಗಣತಿಗೆ ಏಪ್ರಿಲ್ 15 ರವರೆಗೆ ಮಾತ್ರ ಕಾಲಾವಕಾಶವಿರುತ್ತದೆ. ಬದಲಾವಣೆ ಆಗ್ತಿರೋ ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ ಜಾರಿಗೆ ತರಲಾದ ಈ ಯೋಜನೆ ಸಮಯ ಉಳಿತಾಯ ಮಾಡುವುದಲ್ಲದೆ, ನಿಖರವಾದ ಮಾಹಿತಿ ಸಂಗ್ರಹಕ್ಕೆ ಸಹಕಾರಿಯಾಗಲಿದೆ.

Advertisement

Leave a reply

Your email address will not be published. Required fields are marked *

error: Content is protected !!