Select Page

Advertisement

ಕರ್ನಾಟಕ ರಾಜಭವನ ಹೆಸರು ಬದಲಾವಣೆ ; ಹೊಸ‌ ಹೆಸರು ಏನು..?

ಕರ್ನಾಟಕ ರಾಜಭವನ ಹೆಸರು ಬದಲಾವಣೆ ; ಹೊಸ‌ ಹೆಸರು ಏನು..?

ಬೆಂಗಳೂರು : ಕೇಂದ್ರ ಗೃಹ ಸಚಿವಾಲಯದ‌‌ ನಿರ್ಧಾರದಂತೆ ದೇಶಾದ್ಯಂತ ಎಲ್ಲಾ ರಾಜಭವನದ ಹೆಸರು ಬದಲಾವಣೆ ಮಾಡಿದ್ದು ಕರ್ನಾಟಕದ ರಾಜಭವನಕ್ಕೆ ಲೋಕಭವನ ಎಂದು ನಾಮಕರಣ ಮಾಡಲಾಗಿದೆ.

ತಕ್ಷಣದಿಂದಲೇ ರಾಜಭವನದ ಎಲ್ಲ ಅಧಿಕೃತ ದಾಖಲೆಗಳು, ಸಂವಹನಗಳು ಮತ್ತು ಉಲ್ಲೇಖಗಳಲ್ಲಿ ಹೊಸ ಹೆಸರು ಲೋಕಭವನ ಕರ್ನಾಟಕ ಎಂದು ಬಳಸಬೇಕು. ಎಲ್ಲ ಇಲಾಖೆ ಮತ್ತು ಅಧಿಕಾರಿಗಳು ತಮ್ಮ ದಾಖಲೆಗಳು, ಲೆಟರ್ ಹೆಡ್, ವೆಬ್‍ಸೈಟ್‍ಗಳು ಮತ್ತು ಇತರ ಸಂವಹನಗಳಲ್ಲಿ ಬದಲಾವಣೆಯನ್ನು ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಮರುನಾಮಕರಣಕ್ಕೆ ಕಾರಣ : ರಾಜಭವನ ಎಂಬುದು ಬ್ರಿಟಿಷ್‌ ಶೈಲಿಯನ್ನು ಪ್ರತಿಬಿಂಬಿಸುತ್ತಿದ್ದು, ರಾಜ್ಯಪಾಲರ ಅಧಿಕಾರ, ವೈಭವ ಮತ್ತು ಆಡಳಿತದ ಶ್ರೀಮಂತಿಕೆಯನ್ನು ಸೂಚಿಸುತ್ತವೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಈ ಭವನಗಳನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡುವ ನಿರ್ಧಾರ ಕೈಗೊಂಡಿದೆ.

Advertisement

Leave a reply

Your email address will not be published. Required fields are marked *

error: Content is protected !!