VIDEO – ಪೋಟೋ ನೆಪದಲ್ಲಿ ಗಂಡನನ್ನೇ ಕೃಷ್ಣಾ ನದಿಗೆ ತಳ್ಳಿದ ಪತ್ನಿ ; ಕೊನೆಗೂ ಬದುಕುಳಿದ ಬಡಜೀವ..!
ರಾಯಚೂರು : ಸೇತುವೆ ಪಕ್ಕದಲ್ಲಿ ನಿಂತು ಪೋಟೋ ತಗೆಸಿಕೊಳ್ಳುವ ನೆಪದಲ್ಲಿ ಸ್ವಂತ ಗಂಡನನ್ನೇ ನದಿಗೆ ತಳ್ಳಿದ ಘಟನೆ ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದಿದೆ.
ರಾಯಚೂರಿನ ಶಕ್ತಿನಗರ ಮೂಲದ ಯುವಕ ತಾತಪ್ಪ ಹಾಗೂ ಯಾದಗಿರಿಯ ವಡಗೆರಾ ತಾಲೂಕಿನ ಗದ್ದೆಮ್ಮ ಜೊತೆ ಮದುವೆಯಾಗಿತ್ತು. ಇಬ್ಬರೂ ಬೈಕ್ ಮೇಲೆ ತೆರಳುವ ವೇಳೆ ಕೃಷ್ಣಾ ನದಿ ಪಕ್ಕ ಬೈಕ್ ನಿಲ್ಲಿಸಿದ್ದಾರೆ.
ಈ ವೇಳೆ ತಾತಪ್ಪನ ಪತ್ನಿ ಗದ್ದೆಮ್ಮ ಪೋಟೋ ತಗೆಯುತ್ತೇನೆ ಎಂದು ಗಂಡನನ್ನು ಬ್ರಿಡ್ಜ್ ಪಕ್ಕ ನಿಲ್ಲಿಸಿದ್ದಾಳೆ. ಕೂಡಲೇ ಆತನನ್ನು ನದಿಗೆ ತಳ್ಳಿದ್ದಾಳೆ. ಆದರೆ ದುರಾದೃಷ್ಟವಶಾತ್ ಯುವಕ ಈಜಿ ಬಂಡೆಯ ಮೇಲೆ ಕುಳಿತಿದ್ದಾನೆ.
ದಾರಿಯಲ್ಲಿ ಸಾಗುವ ಯುವಕರಿಗೆ ಕೈ ಮಾಡಿ ಕಾಪಾಡಿ ಎಂದು ಕೂಗಿಕೊಂಡಾಗ ಕೊನೆಗೆ ಯುವಕರು ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಮದುವೆಯಾದ ಹೊಸದರಲ್ಲೇ ಯುವತಿಯ ಕೈಯಿಂದ ಗಂಡ ಪಾರಾಗಿದ್ದಾನೆ.


