ಭಕ್ತೆಯ ಮೇಲೆ ಹಲ್ಲೆ ಮಾಡಿದ್ದು ನೋವಾಗಿದೆ ; ಕಳ್ಳ ಸ್ವಾಮಿ ಕೊಟ್ಟ ಸ್ಪಷ್ಟೀಕರಣ…!
ಬೆಳಗಾವಿ : ಮೂಡಲಗಿ ತಾಲೂಕಿನ ಶಿವಾಪೂರ ಗ್ರಾಮದ ಮಠವೊಂದರ ಕಳ್ಳ ಸ್ವಾಮೀಜಿ ಮುಖವಾಡ ಬಯಲಾಗಿದ್ದು, ಈಗ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಮಠಕ್ಕೆ ಬಂದ ಭಕ್ತೆಯ ಮೇಲೆ ಗ್ರಾಮಸ್ಥರು ಜೋರು ಧ್ವನಿಯಲ್ಲಿ ಮಾತಾಡಿ ಹಲ್ಲೆ ಮಾಡಿದ್ದು ಮನಸ್ಸಿಗೆ ನೋವು ತರಿಸಿದೆ. ನನ್ನ ವಿರುದ್ಧ ಗ್ರಾಮದ ಕೆಲವರು ಷಡ್ಯಂತ್ರ ರೂಪಿಸಿದ್ದಾರೆ ಎಂದು ಅಡವಿಸಿದ್ದರಾಮ ಸ್ವಾಮೀಜಿ ಹೇಳಿದರು.
ಮಠಕ್ಕೆ ಬಂದ ಭಕ್ತರು ಉಳಿದುಕೊಳ್ಳಲು ವ್ಯವಸ್ಥೆ ಇದೆ. ಎಲ್ಲ ಭಕ್ತರಂತೆ ಮಹಿಳೆಯೂ ಬಂದಿದ್ದಾರೆ. ರಾತ್ರಿ 9 ಗಂಟೆ ವೇಳಿಗೆ ಊಡ ಮುಗಿಸಿ ಮಹಿಳೆ ತನ್ನ ಕೋಣೆಗೆ ಹೋಗುವ ವೇಳೆ ಕೆಲವರು ಇದೇ ವಿಚಾರವಾಗಿ ಹಲ್ಲೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನಾನು ಯುವಕರಿಗೆ ಹೇಳಿದ್ದೆ. ಈ ವಿಚಾರವಾಗಿ ಬೆಳಿಗ್ಗೆ ಕುಳಿತು ಮಾತನಾಡೋಣ ಎಂದು. ಆದರೆ ಕೆಲವರು ಹಲ್ಲೆಗೆ ಮುಂದಾದರು. ಅವರು ಅಂದುಕೊಂಡಂತೆ ಏನು ನಡೆದಿಲ್ಲ ಎಂದರು.
ತಾಕೂಕಿನ ಶಿವಾಪೂರ (ಹ) ಗ್ರಾಮದ ಮಠವೊಂದರ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಬಂಧದ ಆರೋಪದ ಹಿನ್ನಲೆಯಲ್ಲಿ ಗ್ರಾಮಸ್ಥರು ಸ್ವಾಮೀಜಿಯನ್ನು ಮಠದಿಂದ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದ ಹಿರಿಯದ ಸಮ್ಮುಖದಲ್ಲಿ ಪೀಠದಿಂದ ಉಚ್ಚಾಟನೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

