ಬೆಳಗಾವಿ : ರಾಜ್ಯ ಎಂದು ಬಂದರೆ ನಮಗೆ ಕರ್ನಾಟಕ ಮುಖ್ಯ, ದೇಶ ಎಂದಾದರೆ ಅದು ಭಾರತ. ನಮ್ಮ ರಾಜ್ಯದ ತಂಡ ಗೆಲ್ಲಬೇಕು ಎಂಬ ಆಶಯ ಸದಾಕಾಲವೂ ಇದ್ದೇ ಇರುತ್ತದೆ, ಈ ಸಲ ಕಪ್‌ ನಮ್ದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಐಪಿಎಲ್ ಪೈನಲ್ ತಲುಪಿರುವ RCB ತಂಡಕ್ಕೆ ಶುಭ ಹಾರೈಸಿದರು.

ಸೋಮವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಕ್ರಿಕೆಟ್ ನನ್ನ ನೆಚ್ಚಿನ ಕ್ರೀಡೆ. ಕಳೆದ ಇಪ್ಪತ್ತು ವರ್ಷಗಳ ಹಿಂದೆ ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡುತ್ತಿದೆ. ಅಂದು ಅಂತರಾಷ್ಟ್ರೀಯ ತಂಡದಲ್ಲಿ ಸುಮಾರು ಆರು ಜನ ಕನ್ನಡಿಗರು ಆಡುತ್ತಿದ್ದರು ಎಂದು ಹಳೆ ನೆನಪು ಮೆಲುಕು ಹಾಕಿದರು.

ಎಲ್ಲರೂ ನಮ್ಮವರು ಗೆಲ್ಲಲಿ ಎನ್ನುವುದು ಸ್ವಾಭಾವಿಕ. ಹೀಗಾಗಿ ನಾಳೆ ನಡೆಯುವ ಪಂದ್ಯದಲ್ಲಿ ನಮ್ಮ ಆರ್‌ಸಿಬಿ ಗೆಲ್ಲಲಿ ಎಂದು ಹರಿಸಿದ ಸಚಿವರು, ಕಳೆದ ಇಪ್ಪತ್ತು ವರ್ಷಗಳಿಂದ ನಾನು ಕ್ರಿಕೆಟ್‌, ಸಿನಿಮಾ ನೋಡುತ್ತಿಲ್ಲ. ಆದರೆ ಕ್ರಿಕೆಟ್‌ ನನ್ನ ನೆಚ್ಚಿನ ಕ್ರೀಡೆ. ಹೀಗಾಗಿ ಸಮಯ ಸಿಕ್ಕಾಗ ಈಗಲೂ ಕ್ರಿಕೆಟ್‌ ಆಡುತ್ತೇನೆಂದು ತಿಳಿಸಿದರು.