ಬೆಂಗಳೂರು : ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್‌ ಕೇಸ್‌ ಗೆ ತುಂಬಿ ಪರಾರಿಯಾಗಿದ್ದ ಪಾಪಿ ಪತಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬೆಂಗಳೂರು ಪೊಲೀಸರು ಸೆರೆಹಿಡಿದಿದ್ದಾರೆ. ಕಳೆದೆರೆಡು ದಿನಗಳ ಹಿಂದೆ ನಡೆದಿದ್ದ ಈ ಘಟನೆ ನಿನ್ನೆಯಷ್ಟೇ ಬೆಳಕಿಗೆ ಬಂದಿತ್ತು.

ಗೌರಿ ಅನಿಲ್‌ ಸಾಂಬೇಕರ್‌ ಮೃತ ಯುವತಿ. ಎರಡು ವರ್ಷದ ಹಿಂದೆ ರಾಕೇಶ್‌ ಜೊತೆ ಗೌರಿಯ ವಿವಾಹವಾಗಿತ್ತು. ಮಹಾರಾಷ್ಟ್ರ ಮೂಲದ ಈ ಜೋಡಿ ಬನ್ನೇರುಘಟ್ಟ ರಸ್ತೆಯ ದೊಡ್ಡ ಕಮ್ಮನಹಳ್ಳಿಯಲ್ಲಿ ವಾಸಿಸುತ್ತಿದ್ದರು.

ಎರಡು ದಿನದ ಹಿಂದೆ ರಾತ್ರಿ ಗಂಡ ಹೆಂಡತಿ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಬಳಿಕ ಪರಾರಿಯಾಗಿದ್ದ ರಾಕೇಶ್‌ ತಾನು ಪತ್ನಿಯನ್ನು ಹತ್ಯೆಗೈದು ಬಂದಿರುವುದಾಗಿ ನೆರೆಮನೆಯವರಿಗೆ ತಿಳಿಸಿದ್ದ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕೂಡಲೇ ಸ್ಥಳಕ್ಕೆ ಧಾವಿಸಿ ಕೈಗೊಂಡ ಪೊಲೀಸರು ಆರೋಪಿಯನ್ನು ಸೆರೆಹಿಡಿದಿದ್ದು, ಈಗ ಬೆಂಗಳೂರಿಗೆ ಕರೆತರುತ್ತಿದ್ದಾರೆ.