ಸದನದಲ್ಲಿ ಧೃತರಾಷ್ಟ್ರನಂತೆ ನಡೆದುಕೊಂಡರು : ಹೆಬ್ಬಾಳಕರ್ ಕಣ್ಣೀರು
ಬೆಳಗಾವಿ : ಪರಿಷತ್ತಿನಲ್ಲಿ ನಡೆದ ಘಟನೆಯಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ನಮ್ಮ ಪಕ್ಷದ ಮುಖಂಡ ರಾಹುಲ್ ಗಾಂಧಿ ವಿರುದ್ಧ ಮಾತನಾಡಿದ್ದಕ್ಕೆ ನಾನು ಕೊಲೆಗಾರ ಎಂದು ಹೇಳಿರುವೆ. ಆದರೆ ಚಿಂತಕರ ಚಾವಡಿಯಲ್ಲಿ ನನ್ನ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದಾಗ ಕೆಲವರು ಧೃರರಾಷ್ಠ್ರನಂತೆ ವರ್ತನೆ ಮಾಡಿದರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಶುಕ್ರವಾರ ನಗರದ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿರುದ್ಧ ಗೃಹ ಸಚಿವರ ಹೇಳಿಕೆ ವಿರೋಧಿಸಿ ನಾವು ವಿಧಾನ ಪರಿಷತ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದೇವು. ಈ ಸಂದರ್ಭದಲ್ಲಿ ಕಲಾಪವನ್ನು ಮುಂದೂಡಿದ್ದರು. ಆಗ ಸಿ.ಟಿ ರವಿ ನನ್ನನ್ನು ಉದ್ದೇಶಿಸಿ ರಾಹುಲ್ ಗಾಂಧಿ ಅವರಿಗೆ ಡ್ರಗ್ ವ್ಯಸನಿ ಎಂದರು. ಆಗ ನಾನು ನೀವು ಕೊಲೆಗಡುಕ ಎಂದು ಹೇಳಿದೆ ಇದಕ್ಕೆ ಅವರು ಅಶ್ಲೀಲ ಪದ ಬಳಕೆ ಮಾಡಿದರು ಎಂದರು.
ಪರಿಷತ್ ಘಟನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವು ಉಂಟಾಗಿದೆ. ಸಿ.ಟಿ ರವಿ ಅಶ್ಲೀಲ ಹೇಳಿಕೆ ನೀಡಿದರು ಕೆಲವರು ಧೃತರಾಷ್ಟ್ರರಂತೆ ವರ್ತನೆ ಮಾಡಿದ್ದು ಮನಸ್ಸಿಗೆ ನೋವಾಯಿತು. ನನ್ನ ಬೆಂಬಲಕ್ಕೆ ಕಾಂಗ್ರೆಸ್ ಸದಸ್ಯರು ನಿಂತರು ಆದರೆ ಬಿಜೆಪಿ ಸದಸ್ಯರು ಅಶ್ಲೀಲ ಪದ ಕೇಳಿಸಿಕೊಂಡರು ನನ್ನ ಬೆಂಬಲಕ್ಕೆ ಬರಲಿಲ್ಲ. ನಮ್ಮ ನಾಯಕನ ವಿರುದ್ಧ ಹೇಳಿಕೆ ನೀಡಿದಾಗ ನಾನು ಪ್ರತಿಕ್ರಿಯೆ ಮಾಡಿದ್ದೇನೆ ಆದರೆ ಸಿ.ಟಿ ರವಿ ಈ ರೀತಿ ಮಾತು ನನ್ನನ್ನು ಕುಗ್ಗಿಸಿದೆ ಎಂದರು.
ನನ್ನ ಸೊಸೆ ಆಸ್ಪತ್ರೆಯಲ್ಲಿ ಇದ್ದಳು, ಅವಳೇ ಕರೆ ಮಾಡಿ ನನಗೆ ಆತ್ಮಸ್ಥೈರ್ಯ ತುಂಬಿದರು. ನನ್ನ ಮಗ ಬೆಂಗಳೂರಿನಲ್ಲಿದ್ದಾನೆ ಆತ ಕರೆ ಮಾಡಿ ಸಾಂತ್ವನ ಹೇಳಿದ. ನನ್ನ ಬೆಂಬಲಕ್ಕೆ ಕ್ಷೇತ್ರದ ಜನ ಇದ್ದಾರೆ. ಚಿಂತಕರ ಚಾವಡಿಯಲ್ಲಿ ಅಶ್ಲೀಲ ಪದ ಬಳಕೆ ಮಾಡಿದ್ದು ನನಗೆ ನೋವಾಗಿದೆ ಎಂದರು.


