ಕಾಗವಾಡ : ಹೆತ್ತ ಮಗನನ್ನೇ ಕೊಂದ ತಾಯಿ ; ಗಂಡ – ಹೆಂಡತಿ ಜಗಳದಲ್ಲಿ ಮಗು ಬಲಿ
ಕಾಗವಾಡ : ಹೆತ್ತ ಮಗನನ್ನೇ ಕೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಾಗವಾಡ ತಾಲೂಕಿನ ಉಗಾರ ಖುರ್ದ ನ ಫರೀದಖಾನವಾಡಿ ತೋಟದಲ್ಲಿ ನಡೆದಿದೆ.
ಸಾತ್ವಿಕ್ ರಾಹುಲ ಕಟಗೇರಿ ಮೃತ ಬಾಲಕ. ಈತನ ತಾಯಿ ಭಾಗ್ಯಶ್ರೀ ಶನಿವಾರ ಬೆಳಿಗ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ವರ್ಷಗಳ ಹಿಂದೆ ರಾಹುಲ ಮಾರುತಿ ಕಟಗೇರಿ ಈತನು ಭಾಗ್ಯಶ್ರೀ ಎಂಬುವಳನ್ನು ಮದುವೆಯಾಗಿದ್ದು, ದಂಪತಿಗಳು ಫರೀದಖಾನವಾಡಿಯ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಬೆಳಗಾವಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಆರ್.ಎಸ್. ಬಸರಗಿ, ಡಿವೈಎಸ್‌ಪಿ ಪ್ರಶಾಂತ ಮುನ್ನೋಳಿ, ಸಿಪಿಐ ಸಂತೋಶ ಹಳ್ಳೂರ, ಪಿಎಸ್‌ಐ ಜಿ.ಜಿ. ಬಿರಾದರ, ಸಿಡಿಪಿಓ ಸಂಜೀವಕುಮಾರ ಸದಲಗೆ ಭೇಟಿನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಪ್ರಕರಣ ಕುರಿತು ಮೃತ ಬಾಲಕನ ತಂದೆ ರಾಹುಲ ಕಟಗೇರಿ ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತಾಯಿ ಭಾಗ್ಯಶ್ರೀ ಕಟಗೇರಿಯನ್ನು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ.


