Video : ಚನ್ನಮ್ಮ ವೃತ್ತದಲ್ಲಿ ಹೊಡೆದಾಡಿಕೊಂಡ ಪುಂಡರಿಗೆ ಪೊಲೀಸರಿಂದ ಲಾಠಿ ರುಚಿ
ಬೆಳಗಾವಿ : ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಎಲ್ಲರೂ ಸಂಭ್ರಮದ ಆಚರಣೆಯಲ್ಲಿ ತೊಡಗಿದ್ದರೆ ಪುಂಡರ ಗುಂಪೊಂದು ಇದೇ ಸಂದರ್ಭದಲ್ಲಿ ಹೊಡೆದಾಡಿಕೊಂಡಿದ್ದೆ.
ಹೊಡೆದಾಟ ಪ್ರಾರಂಭ ಆಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಭರ್ಜರಿ ಲಾಠಿ ರುಚಿ ತೋರಿಸಿದರು. ಆಗ ಪುಂಡರ ಗುಂಪು ಸ್ಥಳದಿಂದ ಕಾಲ್ಕಿತ್ತಿದೆ.
ಈ ಬಾರಿಯ ರಾಜ್ಯೋತ್ಸವ ಆಚರಣೆಗೆ ನಗರ ಪೊಲೀಸ್ ವ್ಯವಸ್ಥೆ ಅದ್ಬುತ ಕೆಲಸ ಮಾಡಿದೆ. ಬಿಗಿ ಭದ್ರತೆ ಕೈಗೊಂಡು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದು ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.


