ಬೆಳಗಾವಿಯಲ್ಲಿ ಖಾಕಿ ದರ್ಪ : ಬಾವುಟ ಹಿಡಿದಿದ್ದ ಯುವಕನ್ನ ಥಳಿಸಿದ್ರಾ ಪೊಲೀಸ್ ಅಧಿಕಾರಿ..?
ಬೆಳಗಾವಿ : ಕನ್ನಡ ಧ್ವಜ ಹಿಡಿದು ಡ್ಯಾನ್ಸ್ ಮಾಡಿದ್ದ ಯುವಕರ ಮೇಲೆ ಹಲ್ಲೆ ಮಾಡಿದ್ದ ಘಟನೆ ನಂತರ, ಬಾವುಟ ಹಿಡಿದ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಬೇಕಿದ್ದ ಡಿಸಿಪಿ ಕಪಾಳಕ್ಕೆ ಹೊಡೆದಿದ್ದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಯುವಕ ಆರೋಪಿಸಿದ್ದಾನೆ.
ಖಾಸಗಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡಿದ್ದ ಯುವಕರ ಮೇಲೆ ಸಹಪಾಠಿಗಳಿಂದ ಹಲ್ಲೆ ನಡೆದಿದೆ. ನಂತರ ಹಲ್ಲೆಗೆ ಒಳಗಾದ ಯುವಕರನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡ ಪೊಲೀಸ್ ಅಧಿಕಾರಿಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಗೆ ಒಳಗಾದ ಯುವಕರಿಗೆ ರಕ್ಷಣೆ ನಿಡಬೇಕಿದ್ದ ಪೊಲೀಸರೇ ಯುವಕರ ಮೇಲೆ ಧರ್ಪ ತೋರಿದರಾ ಎಂಬುದು ಸಧ್ಯದ ಪ್ರಶ್ನೆ.
ಹಲ್ಲೆ ಮಾಡಿದವರ ಮೇಲೆ ಕ್ರಮಕ್ಕೆ ಕನ್ನಡಪರ ಸಂಘಟನೆ ಸದಸ್ಯರು ಆಗ್ರಹಿಸಿದ್ದಾರೆ. ಜೊತೆಗೆ ಪೊಲೀಸ್ ಅಧಿಕಾರಿಗಳ ನಡೆಯನ್ನು ಖಂಡಿಸಿದ್ದಾರೆ.