Select Page

Advertisement

ಸಂಸದ ಜಗದೀಶ್ ಶೆಟ್ಟರ್ ನೂತನ‌ ಕಚೇರಿ ಉದ್ಘಾಟನೆ

ಸಂಸದ ಜಗದೀಶ್ ಶೆಟ್ಟರ್ ನೂತನ‌ ಕಚೇರಿ ಉದ್ಘಾಟನೆ

ಬೆಳಗಾವಿ : ದಸರಾ ಹಬ್ಬದ ಹಿನ್ನಲೆಯಲ್ಲಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಅವರ ನೂತನ ಕಚೇರಿಯನ್ನು ಶನಿವಾರ ಉದ್ಘಾಟನೆ ಮಾಡಲಾಯಿತು.

ನಗರದ ರಾಣಿ ಚನ್ನಮ್ಮ ವೃತ್ತದ ಹತ್ತಿರದ ಕಾಡಾ ಕಚೇರಿಯ ಒಂದನೇ ಮಹಡಿಯಲ್ಲಿ ಸಂಸದರ ನೂತನ ಕಚೇರಿ ಉದ್ಘಾಟನೆ ನೆರವೇರಿತು.

ಈ‌ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ರಮೇಶ್ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ ಮಾಜಿ ಸಂಸದೆ ಮಂಗಳ ಅಂಗಡಿ, ಜಿಲ್ಲಾಧ್ಯಕ್ಷ ಶುಭಾಷ್ ಪಾಟೀಲ್, ಮಹಾಪೌರ ಸವಿತಾ ಕಾಂಬಳೆ.

ಮಾಜಿ ಶಾಸಕರಾದ ಅನಿಲ್ ಬೆನಕೆ, ಮಹಾಂತೇಶ್ ಕೌಟಿಗಿಮಠ, ಸಂಜಯ್ ಪಾಟೀಲ್, ಜಗದೀಶ್ ಮಟಗುಡ್, ವಿಶ್ವನಾಥ ಪಾಟೀಲ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!