ಎ ಕಿಡ್ಸ್ ಫ್ರೀ ಸ್ಕೋಲ್ ನಲ್ಲಿ ನವರಾತ್ರಿ ಸಂಭ್ರಮ
ಬೆಂಗಳೂರು : ನವರಾತ್ರಿ ಹಬ್ಬದ ಹಿನ್ನಲೆಯಲ್ಲಿ ನಗರದ ಅತ್ತಿಬೆಲೆಯಲ್ಲಿರುವ ಎ ಕಿಡ್ಸ್ ಫ್ರೀ ಸ್ಕೋಲ್ ನಲ್ಲಿ ಪುಟಾಣಿ ಮಕ್ಕಳು ನವದುರ್ಗೆಯರ ವೇಶದಲ್ಲಿ ಗಮನಸೆಳೆದರು.
ನವರಾತ್ರಿ ಹಿನ್ನಲೆಯಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ವಿಭಿನ್ನ ವೇಶದಲ್ಲಿ ಪುಟಾಣಿಗಳು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಜೆ.ಎಸ್ ಸಂತೋಷ್.
ಮಕ್ಕಳಿಗೆ ಪಠ್ಯದ ಜೊತೆಗೆ ನಮ್ಮ ಧಾರ್ಮಿಕ ಆಚರಣೆಯ ಮಹತ್ವ ತಿಳಿಸಿಕೊಡಬೇಕು. ಬಾಲ್ಯದಲ್ಲಿ ಈ ರೀತಿಯ ಕಾರ್ಯಕ್ರಮ ಮಾಡುವುದರಿಂದ ಮಕ್ಕಳಿಗೆ ಧಾರ್ಮಿಕತೆಯ ಮೇಲೆ ಆಸಕ್ತಿ ಮೂಡುತ್ತದೆ ಎಂದರು.

ಮಹಾನವಮಿ ಹಿನ್ನಲೆಯಲ್ಲಿ ದುರ್ಗೆಯಿಂದ ದುಷ್ಟ ಸಂಹಾರದ ದೃಶ್ಯವನ್ನು ಪುಟಾಣಿಗಳು ಪ್ರದರ್ಶನ ಮಾಡಿದರು. ಜೊತೆಗೆ ಸರಸ್ವತಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ಹಾಗೂ ಆಡಳಿತ ವರ್ಗದ ಸದಸ್ಯರು ಉಪಸ್ಥಿತರಿದ್ದರು.


