Video – ಕೊಳಲು ನುಡಿಸುವಾಗಲೇ ಮೆದುಳಿನ ಶಸ್ತ್ರಚಿಕಿತ್ಸೆ ; ಚಿಕಿತ್ಸಾ ವೆಚ್ಚ ಎಷ್ಟು ಗೊತ್ತಾ….?
ಬೆಳಗಾವಿ : ರೋಗಿಯ ಕೈಗೆ ಕೊಳಲು ಕೊಟ್ಟು ಆತನ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಕೊಲ್ಲಾಪುರದ ಕನ್ಹೇರಿ ಮಠದ ಸಿದ್ಧಗಿರಿ ಆಸ್ಪತ್ರೆ ವೈದ್ಯರ ತಂಡ ಮಹತ್ವದ ಮೈಲುಗಲ್ಲು ಸಾಧಿಸಿದೆ.
ಗುರುವಾರ ನಗರದ ಸಾಹಿತ್ಯ ಭವನದಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಡಾ. ಶಿವಶಂಕರ್ ಮರಜಕ್ಕೆ ಶಸ್ತ್ರಚಿಕಿತ್ಸೆ ಕುರಿತು ಮಾಹಿತಿ ನೀಡಿದರು. ಕೊಲ್ಹಾಪುರದ ಕನ್ಹೇರಿ ಮಠದ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಮೆದುಳು
ಶಸ್ತ್ರಚಿಕಿತ್ಸೆಗಾಗಿ ರೋಗಿ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರ ತಂಡ ನಿರಂತರ 5 ಗಂಟೆಗಳ ಕಾಲ ಅವೇಕ್ ಕ್ರೆನಿಯೋಟಮಿ’ ಶಸ್ತ್ರಚಿಕಿತ್ಸೆ ಮೂಲಕ ಮೆದುಳಿನ ಗೆಡ್ಡೆ ಹೊರತಗೆಯಲಾಗಿದೆ ಎಂದರು.
ದೇಶಾದ್ಯಂತ ಈ ರೀತಿಯ ಶಸ್ತ್ರಚಿಕಿತ್ಸೆ ನೀಡುವ ಬೆರಳೆಣಿಕೆಯಷ್ಟು ಸಂಸ್ಥೆಗಳಲ್ಲಿ ಮಾತ್ರ ಅವಕಾಶವಿದ್ದು, ಇದರಲ್ಲಿ ನಮ್ಮ ಸಂಸ್ಥೆ ಕೂಡಾ ಒಂದು. ಇದಕ್ಕೆ ಸುಮಾರು 10 ಲಕ್ಷದ ವರೆಗೂ ಖರ್ಚು ತಗುಲುತ್ತದೆ. ಆದರೆ ಕನ್ಹೇರಿ ಮಠದ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ
ಕೇಂದ್ರದ ಸಹಕಾರದಿಂದ ಕೇವಲ 1 ಲಕ್ಷ 25 ಸಾವಿರ ರೂ. ನಲ್ಲಿ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಸಂಪೂರ್ಣ ವೆಚ್ಚವನ್ನು ಸಿದ್ಧಗಿರಿ ಸಂಸ್ಥಾನ ನೋಡಿಕೊಳ್ಳುತ್ತಿದೆ ಎಂದು ಕನ್ಹೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾಹಿತಿ ನೀಡಿದರು.
ಸಾಮಾನ್ಯವಾಗಿ ಮೆದುಳು ಸಂಬಂಧಿಸಿದ ಶಸ್ತ್ರಚಿಕಿತ್ಸೆ ಮಾಡಬೇಕಾದ ಸಂದರ್ಭದಲ್ಲಿ ಅರಿವಳಿಕೆ ನೀಡಲು ಸಾಧ್ಯವಿರುವುದಿಲ್ಲ. ಈ ಸಂದರ್ಭದಲ್ಲಿ ರೋಗಿಯ ಆಸಕ್ತಿದಾಯಕ ಕಾರ್ಯ ಮಾಡಿಸುವ ಮೂಲಕ ಅವರ ಮೆದುಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಈ ಪ್ರಕ್ರಿಯೆಗೆ ಅವೇಕ್ ಕ್ರೆನಿಯೋಟಮಿ ಶಸ್ತ್ರಚಿಕಿತ್ಸೆ ಎಂದು ಕರೆಯುವುದುಂಟು.


