ಇಂದು ಬೆಳಗಾವಿ ನಗರದಲ್ಲಿ ನೀರು ಸರಬರಾಜುನಲ್ಲಿ ವ್ಯತ್ಯಯ
ಬೆಳಗಾವಿ : ಬೆಳಗಾವಿ ನಗರದ ಹಿಡಕಲ್ ಮುಖ್ಯ ಕೊಳವೆಯಲ್ಲಿ ಸೋರಿಕೆ ಉಂಟಾಗಿದ್ದು, ಸೆ.19 ರಂದು ತುರ್ತು ರಿಪೇರಿ ಕಾರ್ಯ ಕೈಗೊಂಡಿರುವುದರಿಂದ ನೀರು ಸರಬರಾಜುವಿನಲ್ಲಿ ವ್ಯತ್ಯಯ ಆಗಲಿದೆ.
ನಗರದ ಪ್ರಾತ್ಯಕ್ಷಿಕ ವಲಯಗಳು, ಬಿಮ್ಸ್ ಆಸ್ಪತ್ರೆ. ಕೆ.ಎಲ್.ಇ ಆಸ್ಪತ್ರೆಗಳು ಸೇರಿದಂತೆ ಇಡೀ ಬೆಳಗಾವಿ ನಗರಕ್ಕೆ ಸೆ.20 ರಂದು ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕುಸ್ಸೆಂಪ್-ಕೆ.ಯು.ಐ.ಡಿ.ಎಫ್.ಸಿ ಅಧೀಕ್ಷಕ
ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.