Select Page

Advertisement

ಸತೀಶ್ ಜಾರಕಿಹೊಳಿ ಆಪ್ತರಿಗೆ ಒಲಿದ ಅಧ್ಯಕ್ಷ ಸ್ಥಾನ ; ಸವದಿ ಚಾಣಾಕ್ಷ ನಡೆ

ಸತೀಶ್ ಜಾರಕಿಹೊಳಿ ಆಪ್ತರಿಗೆ ಒಲಿದ ಅಧ್ಯಕ್ಷ ಸ್ಥಾನ ; ಸವದಿ ಚಾಣಾಕ್ಷ ನಡೆ

ಅಥಣಿ : ತೀವ್ರ ಕುತೂಹಲ ಮೂಡಿಸಿದ್ದ ಅಥಣಿ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಸೋಮವಾರ ನಡೆಯಿತು. ಅಧ್ಯಕ್ಷರಾಗಿ ಸಚಿವ ಸತೀಶ್ ಜಾರಕಿಹೊಳಿ ಆಪ್ತ ಸದಾಶಿವ ಬುಟಾಳಿ ಅವರ ಪತ್ನಿ ಶಿವಲೀಲಾ ಬುಟಾಳಿ ಹಾಗೂ ಉಪಾಧ್ಯಕ್ಷರಾಗಿ ಭುವನೇಶ್ವರಿ ಯಂಕಚ್ಚಿ ಆಯ್ಕೆಯಾಗಿದ್ದಾರೆ.

ಅಥಣಿ ಪುರಸಭೆಯಲ್ಲಿ ಮೂಲ ಹಾಗೂ ವಲಸಿಗ ಕಾಂಗ್ರೆಸ್ ನಡುವೆ ಅಧ್ಯಕ್ಷ ಗಾದಿಗೆ ಪೈಪೋಟಿ ಏರ್ಪಟ್ಟಿತ್ತು.‌ ಸಚಿವ ಸತೀಶ್ ಜಾರಕಿಹೊಳಿ ಬಣ 15 ಸದಸ್ಯರು ರೆಸಾರ್ಟ್ ಗೆ ತೆರಳಿದ್ದರು. ಆದರೆ ಇವೆಲ್ಲವನ್ನೂ ಮನಗಂಡ ಶಾಸಕ ಲಕ್ಷ್ಮಣ ಸವದಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ ಮಾಡುವ ಮೂಲಕ ಚಾಣಾಕ್ಷ ನಡೆ ಅನುಸರಿಸಿದ್ದಾರೆ.

ಶಿವಲೀಲಾ ಸದಾಶಿವ ಬುಟಾಳಿ ಅಧ್ಯಕ್ಷ ಸ್ಥಾನಕ್ಕೆ ( ಸಾಮಾನ್ಯ ಮಹಿಳೆ ಮಿಸಲು) ಮತ್ತು ಭುವನೇಶ್ವರಿ ಬೀರಪ್ಪ ಯಕ್ಕಂಚಿ ( ಹಿಂದುಳಿದ ವರ್ಗಗಳ ಮಹಿಳೆ ಮೀಸಲು ) ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಅವರ ವಿರುದ್ಧ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗದೇ ಇರುವ ಹಿನ್ನೆಲೆಯಲ್ಲಿ

ಚುನಾವಣಾ ಅಧಿಕಾರಿಯಾಗಿದ್ದ ತಹಶೀಲ್ದಾರ್ ಸಿದರಾಯ ಬೋಸಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ಪುರಸಭೆಯ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಉಪತಹಸಿಲ್ದಾರ ಎಂ. ವೈ ಯತ್ನಟ್ಟಿ ಸಹಾಯಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

Advertisement

Leave a reply

Your email address will not be published. Required fields are marked *

error: Content is protected !!