Select Page

Advertisement

ಓಮಾನ್ ನಲ್ಲಿ ಭೀರಕ ರಸ್ತೆ ಅಪಘಾತ ; ಗೋಕಾಕ್ ಮೂಲದ ನಾಲ್ವರು ಸಾವು

ಓಮಾನ್ ನಲ್ಲಿ ಭೀರಕ ರಸ್ತೆ ಅಪಘಾತ ; ಗೋಕಾಕ್ ಮೂಲದ ನಾಲ್ವರು ಸಾವು

ಬೆಳಗಾವಿ: ಓಮಾನ್‌ನ ಹೈಮಾ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗೋಕಾಕ್ ನಿವಾಸಿಗಳಾದ ನಾಲ್ವರು ಮೃತಪಟ್ಟಿದ್ದು ಸಂಸದ ಈರಣ್ಣ ಕಡಾಡಿ ಸಂತಾಪ‌ ಸೂಚಿಸಿದ್ದಾರೆ.

ಸಲಾಲಾದಿಂದ ಮುಸ್ಕತ್‌ಗೆ ತೆರಳುತ್ತಿದ್ದ ವೇಳೆ ಹೈಮಾ ಪ್ರದೇಶದ ಹತ್ತಿರ ಸಂಭವಿಸಿದ ಅಪಘಾತದಲ್ಲಿ ಗೋಕಾಕ್ ನಗರದ ನಿವಾಸಿಗಳಾದ ಪವನ್‌ಕುಮಾರ್ ಮಾಯಪ್ಪ ತಹಶೀಲ್ದಾರ, ಪೂಜಾ ಮಾಯಪ್ಪ ತಹಶೀಲ್ದಾರ, ವಿಜಯಾ ಮಾಯಪ್ಪ ತಹಶೀಲ್ದಾರ ಮತ್ತು ಅಳಿಯ ಅದಿಶೇಷ ಬಸವರಾಜ ಮೃತಪಟ್ಟಿದ್ದಾರೆ.

ಶವವನ್ನು ಹೈಮಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತದೇಹಗಳನ್ನು ಭಾರತಕ್ಕೆ ತರಲು ಈಗಾಗಲೇ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರಿಗೆ ಭಾರತೀಯ ರಾಯಭಾರ ಕಚೇರಿಯಿಂದ ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಮನವಿ ಮಾಡಲಾಗಿದೆ ಎಂದು ಕಡಾಡಿ ತಿಳಿಸಿದರು.

ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಮತ್ತು ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಸಂಸದ ಕಡಾಡಿ ಸಂತಾಪ ಸೂಚಿಸಿದರು.

Advertisement

Leave a reply

Your email address will not be published. Required fields are marked *

error: Content is protected !!