ಕಾವಿ ಬಿಚ್ಚಿಟ್ಟು ಹಸಿರು ಅಂಗಿ ಹಾಕಿ : ಲಿಂಗಾಯತ ಮಠಾಧೀಶರಿಗೆ ಯತ್ನಾಳ್ ಕೌಂಟರ್…!

ಬೆಳಗಾವಿ : ಬಸವಣ್ಣನವರ ಹೆಸರಿನಲ್ಲಿ ಹಿಂದೂ ಧರ್ಮಕ್ಕೆ ಅವಮಾನ ಮಾಡಿ ಇಸ್ಲಾಂ ಹಾಗೂ ಲಿಂಗಾಯತ ಸಮಾನ ಎಂದು ಹೇಳುವ ಪ್ರತ್ಯೇಕ ಲಿಂಗಾಯತ ಮಠಾಧೀಶರು ಕಾವಿ ಬಿಚ್ಚಿಟ್ಟು ಹಸಿರು ಅಂಗಿ ಹಾಕಿಕೊಳ್ಳಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದರು.
ಬೆಳಗಾವಿ ನಗರದಲ್ಲಿ ಮಾತನಾಡಿದ ಇವರು. ಸನಾತನ ಸಂಸ್ಕೃತಿ ಹಾಗೂ ವೀರಶೈವ ಲಿಂಗಾಯತರ ಕುರಿತು ಯಾವುದೇ ಸ್ವಾಮೀಜಿ ಮಾತನಾಡಿದರೂ ಯಾವುದೇ ರಾಜಕಾರಣಿ ಮಾತನಾಡಿದರೂ ಸುಮ್ಮನಿರುವುದಿಲ್ಲ. ಅದೇ ಭಾಷೆಯಲ್ಲಿ ಉತ್ತರಿಸುತ್ತೇವೆ ಎಂದು ಎಚ್ಚರಿಸಿದರು.
ಬಸವಣ್ಣನವರ ವಿಚಾರ ಇಟ್ಟುಕೊಂಡು ಮಾಂಸಾಹಾರ, ಸಾರಾಯಿ ಸೇವಿಸಿ ಎಂದು ಹೇಳುವ ಮಠಾಧೀಶರು ಹೇಳುತ್ತಿದ್ದಾರೆ. ಬಸವಣ್ಣನವರು ಹೇಳಿದಂತೆ ಪಾದಪೂಜೆ ವಿರೋಧಿಸಿದ್ದು, ಇನ್ನು ಮುಂದೆ ಪಾದಪೂಜೆ ನಿಲ್ಲಿಸಬೇಕು. ಇಲ್ಲದಿದ್ದರೆ ನಾವೇ ಭಕ್ತರಿಗೆ ಕರೆ ನೀಡುತ್ತೇವೆ ಎಂದರು.


